ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜೀವನದಲ್ಲಿ ಯಶಸ್ಸು ಕೇವಲ ಗುರಿಯಲ್ಲ,ಪ್ರತಿಯೊಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ನಿಜವಾದ ಗುರಿ ಹಾಗೂ ಯಶಸ್ಸನ್ನು ಪಡೆಯಲು ಸಾಧ್ಯ.
ಎಲ್ಲ ಕಾರ್ಯ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿ ಕೊಂಡು ಸಮಾಜದ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿರುವುದರೊಂದಿಗೆ ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಕಂಡಿರುವ ವಿಶ್ವಕರ್ಮರು ಸಮಾಜದ ಒಂದು ಅವಿಭಾಜ್ಯ ಆಸ್ತಿ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಕುಂದಾಪುರ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಇದರ ರಜತ ಮಹೋತ್ಸವದ ಅಂಗವಾಗಿ ವಿಶ್ವಬ್ರಾಹ್ಮಣ ಯುವಕ ಸಂಘ ಹಾಗೂ ವಿಶ್ವಬ್ರಾಹ್ಮಣ ಮಹಿಳಾ ಸಂಘ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜರಗಿದ ವಿಶ್ವಕರ್ಮ ಯುವ ಸಂಗಮ -2017 ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು,ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ಪ್ರತಿ ಮನೆಯಲ್ಲಿ ಎಲ್ಲರೂ ಒಂದೇ ಉದ್ಯೋಗನ್ನು ನೆಚ್ಚಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಸೂಸುವಲ್ಲಿ ಇಂತಹ ಯುವ ಸಂಗಮದ ಕಾರ್ಯಕ್ರಮ ಗಳು ವೇದಿಕೆಯಾಗಿದೆ. ಆದರೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಮಕ್ಕಳ ಪ್ರತಿಭೆಯನ್ನು ಹೊರಸೂಸುವಲ್ಲಿ ವೇದಿಕೆಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಇದರ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ಸಂಘಟನೆಯ ಮೂಲಕ ಶಕ್ತಿ ಇದೆ. ಇದರಿಂದ ಸಂಘ, ಸಮಾಜ ಅಭಿವೃದ್ಧಿಹೊಂದಲು ಸಾಧ್ಯ. ವಿಶ್ವಕರ್ಮರು ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಯತ್ತ ಸಾಗುವಲ್ಲಿ ಕಟಿಬದ್ಧರಾಗೋಣ ಎಂದರು.ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಪಿಡಬ್ಲ್ಯುಡಿ ಗುತ್ತಿಗೆದಾರ ಪ್ರವೀಣ್ ಆಚಾರ್ಯ ರಂಗನಕೆರೆ, ಉದ್ಯಮಿ ಎಂ. ಕೇಶವ ಆಚಾರ್ಯ ಕುಂದಾಪುರ, ಹೃದ್ರೋಗ ಹಾಗೂ ಮಧುಮೇಹ ತಜ್ಞ ಡಾ| ಅಶೋಕ್ ಆಚಾರ್ಯ, ಕೋಟೇಶ್ವರ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.) ಇದರ ಅಧ್ಯಕ್ಷ ಎನ್. ಪ್ರಕಾಶ್ ಆಚಾರ್ಯ ನೇರಂಬಳ್ಳಿ, ಕಾರ್ಯದರ್ಶಿ ಶಶಿಧರ ಆಚಾರ್ಯ, ಗುತ್ತಿಗೆದಾರ ನಾರಾಯಣ ಆಚಾರ್ಯ ಉಡುಪಿ, ಯುವ ಉದ್ಯಮಿ ಪ್ರಕಾಶ್ ಆಚಾರ್ಯ ಕೋಟೇಶ್ವರ, ಸತೀಶ್ ಆಚಾರ್ಯ ಬೇಳೂರು, ಕುಂದಾಪುರ ತಾಲೂಕು ಗ್ಯಾರೇಜ್ ಮಾಲಕರ ಸಹಕಾರಿ ಸಂಘ (ರಿ.) ಇದರ ಅಧ್ಯಕ್ಷ ಕೋಣಿ ನಾರಾಯಣ ಆಚಾರ್ಯ, ಕುಂದಾಪುರ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಇದರ ಉಪಾಧ್ಯಕ್ಷ ಕೆ.ಎನ್. ವೆಂಕಟೇಶ ಆಚಾರ್ಯ, ಭಾಸ್ಕರ ಆಚಾರ್ಯ ಉಪ್ಪಿನಕುದ್ರು, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಸುಮತಿ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂತಾರಾಷ್ಟ್ರಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಕುಂದಾಪುರ ಇವರ ವ್ಯಂಗ್ಯ ಚಿತ್ರ ಪ್ರದರ್ಶನ ಕಾಟೂìನು ಹಬ್ಬ ಜರಗಿತು. ಅಲ್ಲದೇ ಸೆಲ್ಪಿ ಉತ್ಸವ ವಿವಿಧ ಕ್ರೀಡಾಕೂಟ ಜರಗಿತು. ವಿಶ್ವ ಬ್ರಾಹ್ಮಣ ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು. ವಿಘ್ನೇಶ ಆಚಾರ್ಯ ಬೊಬ್ಬರ್ಯನ ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ನಾಗೇಂದ್ರ ಆಚಾರ್ಯ ತಲ್ಲೂರು ವಂದಿಸಿದರು.










