ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ರೂಪಕಲಾ ಕುಂದಾಪುರ’ ಜನಪ್ರಿಯ ನಾಟಕ ತಂಡವು ಕತಾರ್‌ನಲ್ಲಿ ‘ಮೂರು ಮುತ್ತುಗಳು’ ನಾಟಕದ 1300ನೇ ಪ್ರಯೋಗ ಮತ್ತು ಕಾಮಿಡಿ ಎಕ್ಸ್‌ಪ್ರೆಸ್ ಹಾಸ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಹೊಸತಾಗಿ ಆರಂಭಗೊಂಡಿರುವ ವಿಜನ್ ಇವೆಂಟ್ಸ್ ಎಂಬ ಸಂಸ್ಥೆಯು ಎಂಇಎಸ್ ಸ್ಕೂಲ್ ಆಡಿಟೋರಿಯಂನಲ್ಲಿ ಮಾ.17ರ ಸಂಜೆ 4:30ಕ್ಕೆ ಪ್ರದರ್ಶನವನ್ನು ಆಯೋಜಿಸಿದೆ.
ಕತಾರ್‌ನಲ್ಲಿ ನೆಲೆಸಿರುವ ರಾಮಚಂದ್ರ ಶೆಟ್ಟಿ, ದೀಪಕ್ ಶೆಟ್ಟಿ ಹಾಗೂ ಸಮಾನ ಮನಸ್ಕ ಕನ್ನಡಿಗರು ಒಟ್ಟು ಸೇರಿ ಕಲೆ, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಹುಟ್ಟುಹಾಕಿರುವ ಸಂಸ್ಥೆ ವಿಜನ್ ಇವೆಂಟ್ಸ್. ಈ ಸಂಸ್ಥೆಯ ಮೂಲಕ ಮೊದಲ ಭಾರಿಗೆ ಮೂರು ಮುತ್ತುಗಳು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ನಾಟಕ ತಂಡದಲ್ಲಿ ಕರಾವಳಿ ಮುತ್ತು ಖ್ಯಾತಿಯ ಕೆ. ಸತೀಶ್ ಪೈ, ಕೆ. ಸಂತೋಷ್ ಪೈ, ಅಶೋಕ್ ಶ್ಯಾನುಭಾಗ್, ನಾಗೇಶ್ ಕಾಮತ್, ಗಣೇಶ್ ಪ್ರಸಾದ್ ಶೆಣೈ, ನವೀನ್ ನಂದಕುಮಾರ್, ಮಣಿಕಂಠ ಶೆಟ್ಟಿ, ಶ್ವೇತಾ ಮೊದಲಾದವರು ಇರಲಿದ್ದಾರೆ. ಕತಾರ್‌ನ ಕನ್ನಡ ನಾಟಕ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
ಮಾಹಿತಿಗಾಗಿ:
55182799 / 77104773 / 55864569 / 55425694 / 4462007 / 44140077
ಇದನ್ನೂ ಓದಿ:
► ರೂಪಕಲಾ ಕುಂದಾಪುರ: ಕಲಾಪ್ರಿಯರಿಗೆ ಹಾಸ್ಯದ ರಸದೌತಣ ಬಡಿಸಿದ ನಾಟಕ ಸಂಸ್ಥೆ – http://kundapraa.com/?p=2225