ಕುಂದಾಪುರ ವ್ಯಾಸರಾಜ ಮಠ ಸ್ವಾಮೀಜಿ ಪುರಮೆರವಣಿಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನವೀಕೃತಗೊಂಡ ಶ್ರೀ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಶ್ರೀ ಹಯಗ್ರೀವ ತೀರ್ಥ ಶ್ರೀ ಪಾದಂಗಳರವರ ವೃಂದಾವನಗಳ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಸ್ತೀ ಪಾರ್ಕ್‌ನಿಂದ ಮಠದ ತನಕ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರನ್ನು ವೈಭವದ ಪುರಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.

Call us

Click Here

ಪುರಮೆರವಣಿಗೆಯಲ್ಲಿ ಕಳಸ ಹಿಡಿದ ಮಹಿಳೆಯರು ಸೇರಿದಂತೆ ಪಂಚವಾದ್ಯಗಳೊಂದಿಗೆ, ಚಂಡೆ, ಕೀಲುಕುದುರೆ, ತಟ್ಟಿರಾಯ, ಸಾವಿರಾರೂ ಭಕ್ತರು ಪುರಮೆರವಣಿಗೆಗೆ ಸಾಕ್ಷಿಯಾದರು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಸಮಾಜದ ಹಿರಿಯ ಮುಖಂಡರಾದ ಸುದೀರ್ ಪಂಡಿತ್, ಗೋಪಾಲ ರಾವ್ ಉಡುಪಿ, ದಾನಿಗಳಾದ ಕೆ.ಎಮ್.ಶೇಖರ್ ಮತ್ತು ಕೆ.ಎಮ್.ಲಕ್ಷ್ಮಣ, ಜಿ.ಆರ್. ಚಂದ್ರಯ್ಯ, ಬಿ.ಎಸ್.ಮಂಜುನಾಥ್, ಗೋಪಾಲ ಚೆಲ್ಲಿಮಕ್ಕಿ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್ ಗಾಣಿಗ, ಬೆಂಗಳೂರು, ಮುಂಬೈ, ಶಿವಮೊಗ್ಗ, ಭದ್ರಾವತಿ, ಕುಮಟಾ, ದುಬೈ, ಬಾರಕೂರು, ಮಂಗಳೂರು, ಉಳ್ಳಾಲ ಗಾಣಿಗ ಸೇವಾ ಸಂಘ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಮಹಿಳಾ ಸಂಘಟನೆ, ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಮೊದಲಾದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾತ್ರಿ ಮಠದ ವೃಂದಾವನಗಳ ಸ್ಥಾನ ಶುಧ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪುಣ್ಯಾಹವಾಚನ ಸೇರಿದಂತೆ ಅನೇಕ ದಾರ್ಮಿಕ ವಿಧಿ ವಿಧಾನಗಳು ವೇದಮೂರ್ತಿ ಶ್ರೀ ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ನಡೆದವು.

Leave a Reply