ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವ್ಯಾಸರಾಜ ಮಠದಲ್ಲಿ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ನವೀಕೃತಗೊಂಡ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಹಯಗ್ರೀವ ತೀರ್ಥ ಶ್ರೀಪಾದಂಗಳರವರ ವೃಂದಾವನಗಳ ಉದ್ಘಾಟನೆಯನ್ನು ಮಠಾದೀಶರಾದ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ವೇದಮೂರ್ತಿ ಶ್ರೀ ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ವೃಂದಾವನಗಳ ಸ್ಥಾನ ಶುಧ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪುಣ್ಯಾಹವಾಚನ, ವೃಂದಾವನ ಶುದ್ಧಿ, ಪವಮಾನ ಹೋಮ, ವಿರಾಜಮಂತ್ರ ಹೋಮ, ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ ಸೇರಿದಂತೆ ಅನೇಕ ದಾರ್ಮಿಕ ವಿಧಿ ವಿಧಾನಗಳು ನಡೆದವು. ಸಮಾಜ ಭಾಂದವರಿಂದ ಶ್ರೀ ಗುರುಗಳ ಪಾದ ಪೂಜೆ, ಹಾಗೂ ಗುರುಗಳಿಂದ ಮುದ್ರಾಧಾರಣೆ ಕಾರ್ಯಕ್ರಮ ನಡೆಯಿತು.
ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೊಟೇಲ್ ಉದ್ಯಮಿಗಳಾದ ಹಳ್ಳಿಮನೆ ಸಂಜೀವ ರಾವ್, ಜರ್ನಾದನ್ ರಾವ್ ಬೆಂಗಳೂರು, ಬೆಂಗಳೂರು ವೇಣುಗೋಪಾಲ ಕೃಷ್ಣ ಕ್ರೇಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಗೋಪಾಲ ಕೃಷ್ಣ , ಬೆಂಗಳೂರು ಸೋಮ ಕ್ಷತ್ರೀಯ ಗಾಣಿಗ ಸೇವಾ ಸಂಘದ ಅಧ್ಯಕ್ಷ ಎಚ್.ಟಿ.ನರಸಿಂಹ, ಗೌರವಧ್ಯಕ್ಷ ಬಿ.ಎಸ್.ಮಂಜುನಾಥ್, ಸಮಾಜದ ಹಿರಿಯ ಮುಖಂಡರಾದ ಸುದೀರ್ ಪಂಡಿತ್, ದಾನಿಗಳಾದ ಕೆ.ಎಮ್.ಶೇಖರ್ ಮತ್ತು ಕೆ.ಎಮ್.ಲಕ್ಷ್ಮಣ ಹಾಗೂ ಕೆ.ಎಮ್.ಶೇಖರ, ಜಿ.ಆರ್. ಚಂದ್ರಯ್ಯ, ಮುಂಬೈ, ಶಿವಮೊಗ್ಗ, ಭದ್ರಾವತಿ, ಕುಮಟಾ, ದುಬೈ, ಬಾರಕೂರು, ಮಂಗಳೂರು, ಉಳ್ಳಾಲ ಗಾಣಿಗ ಸೇವಾ ಸಂಘ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಮಹಿಳಾ ಸಂಘಟನೆ, ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮೊದಲಾದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿ.ಸಿ.ರಾವ್ ಶಿವಪುರ ಇವರಿಂದ ಹರಿಕಥೆ ಕಾರ್ಯಕ್ರಮ ಜರುಗಿತು.