ದೋಹಾ ಕತಾರ್‌ನಲ್ಲಿ ‘ವಿಜನ್ ಇವೆಂಟ್ಸ್’ ಸಂಸ್ಥೆ ಲೋಕಾರ್ಪಣೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ದೋಹಾ: ನೂತನವಾಗಿ ಆರಂಭಗೊಂಡ ವಿಜನ್ ಇವೆಂಟ್ಸ್ ಸಂಸ್ಥೆಯು ಇಲ್ಲಿನ ಎಂಇಎಸ್ ಸ್ಕೂಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ’ಮೂರು ಮುತ್ತುಗಳು’ ನಾಟಕ ಪ್ರದರ್ಶನ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಳಿಸಿತು. ಕತಾರ್‌ನಲ್ಲಿ ನೆಲೆಸಿರುವ ರಾಮಚಂದ್ರ ಶೆಟ್ಟಿ, ದೀಪಕ್ ಶೆಟ್ಟಿ ಹಾಗೂ ಸಮಾನ ಮನಸ್ಕ ಕನ್ನಡಿಗರು ಒಟ್ಟು ಸೇರಿ ಕಲೆ, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಹುಟ್ಟುಹಾಕಿರುವ ಸಂಸ್ಥೆ ವಿಜನ್ ಇವೆಂಟ್ಸ್‌ನ ಉದ್ಘಾಟನಾ ಸಮಾರಂಭ ಹಾಗೂ ಬಳಿಕ ನಾಟಕ ಪ್ರದರ್ಶನ ಯಶಸ್ವಿಯಾಗಿ ಸಮಾಪನಗೊಂಡವು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಮಿಲಾನ್ ಅರುಣ್ ಮುಖ್ಯ ಅತಿಥಿಗಳಾಗಿದ್ದರು. ದುಬೈ ಫಾರ್ಚೂನ್ ಗ್ರೂಫ್ ಹೋಟೆಲ್ಸ್‌ನ ಮಾಲಕ ಪ್ರವೀಣಕುಮಾರ್ ಶೆಟ್ಟಿ, ಅಲ್-ಝಮಾನ್ ಎಕ್ಸ್‌ಚೆಂಚ್‌ನ ಬಿಜಿನೆಸ್ ಡೆವೆಲಪ್‌ಮೆಂಟ್ ಮ್ಯಾನೆಜರ್ ಫಯಾಝ್ ಸಿ.ಕೆ, ಅಡ್ವಾಸ್ ಟೆಕ್ನಿಕಲ್ ಸರ್ವಿಸ್ ಎಂ.ಡಿ. ರವಿ ಶೆಟ್ಟಿ, ಅಲ್-ಮುಫ್ತಾಹ್ ಜನರಲ್ ಮ್ಯಾನೆಜರ್ ವೀರೇಶ್ ಮಾನಂಗಿ ಮೊದಲಾದವರು ಅತಿಥಿಗಳಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಂಜೆಯ ಕಾರ್ಯಕ್ರಮವನ್ನು ವಿಜನ್ ಇವೆಂಟ್ಸ್‌ನ ಮಹಿಳಾ ಮಣಿಗಳು ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು. ವಿಜನ್ ವಿವೆಂಟ್ಸ್ ಸಂಸ್ಥೆಯ ನಿರ್ದೇಶಕ ದೀಪಕ್‌ಕುಮಾರ್ ಶೆಟ್ಟಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ರೂಪಕಲಾ ತಂಡದ ನಿರ್ದೇಶಕ ಸತೀಶ್ ಪೈ ಅವರನ್ನು ಸನ್ಮಾನಿಸಲಾಯಿತು. ರೂಪಕಲಾ ನಾಟಕ ತಂಡವು ಪ್ರದರ್ಶಿಸಿದ ಮೂರು ಮುತ್ತುಗಳು ನಾಟಕ ಪ್ರೇಕ್ಷಕರ ಮನ್ನಣೆಗೆ ಪಾತ್ರವಾಯಿತು. ನಾಟಕ ತಂಡದಲ್ಲಿ ಕರಾವಳಿ ಮುತ್ತು ಖ್ಯಾತಿಯ ಕೆ. ಸತೀಶ್ ಪೈ, ಕೆ. ಸಂತೋಷ್ ಪೈ, ಅಶೋಕ್ ಶ್ಯಾನುಭಾಗ್, ನಾಗೇಶ್ ಕಾಮತ್, ಗಣೇಶ್ ಪ್ರಸಾದ್ ಶೆಣೈ, ನವೀನ್ ನಂದಕುಮಾರ್, ಮಣಿಕಂಠ ಶೆಟ್ಟಿ, ಶ್ವೇತಾ ಮೊದಲಾದವರು ನಾಟಕದಲ್ಲಿ ಭಾಗವಹಿಸಿದ್ದರು.