ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಕುಂದಾಪುರ ತಾಲೂಕಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಒಟ್ಟು 513.33 ಲಕ್ಷ ಅನುದಾನ ದೊರೆತಿದ್ದು, ಮೊದಲ ಹಂತದಲ್ಲಿ 2 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಬೈಂದೂರು ಸೋಮೇಶ್ವರ, ತ್ರಾಸಿ ಮರವಂತೆ ಬೀಚ್ ಅಭಿವೃದ್ಧಿ ನಡೆಯಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿದ್ದಾರೆ.
ಅವರು ಬೈಂದೂರು ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು. ಬೈಂದೂರು ಒತ್ತಿನಣೆ ಸೋಮೇಶ್ವರ ಅಭಿವೃದ್ಧಿಗೆ 243.85 ಲಕ್ಷ, ಮರವಂತೆ ಬೀಚ್ ಅಭಿವೃದ್ಧಿಗೆ 136.18 ಲಕ್ಷ, ತ್ರಾಸಿ ಬೀಚ್ ಅಭಿವೃದ್ಧಿಗೆ 133.57 ಲಕ್ಷ ಹಣ ಬಿಡುಗಡೆಗೊಡಿದೆ ಎಂದರು.
ಈ ಸಂದರ್ಭ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅನಿತಾ ಬಿ. ಆರ್, ಇಂಜಿನಿಯರ್ ಗಂಗಾಧರ್, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ಪಡುವರಿ ಗ್ರಾಪಂ ಸದಸ್ಯ ಮಾಣಿಕ್ಯ ಹೋಬಳಿದಾರ್, ಎಪಿಎಂಸಿ ಸದಸ್ಯ ಸುರೇಶ್ ಹೋಬಳಿದಾರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಗರಾಜ ಗಾಣಿಗ, ರಘುರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.