ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನೂತನವಾಗಿ ಯುವ ಘಟಕ ರಚಿಸಲಾಗಿದ್ದು ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಕುಂದಾಪುರ ಕೋಟೇಶ್ವರ ಹಳೆಅಳಿವೆಯ ಮಹೇಶ್ ಕುಮಾರ್ ಪೂಜಾರಿ ಅವರನ್ನು ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷ ನೇಮಿಸಿದ್ದಾರೆ.
ಮಹೇಶ್ ಪೂಜಾರಿ ಅವರು ಸದ್ಯ ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯರಾಗಿದ್ದು ರೋಟರಿ ಸನ್ ರೈಸ್ ಕುಂದಾಪುರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ.