ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನಿಗೆ ಮಂಗಳವಾರ ಮಂಗಳಕರವಾಗಿತ್ತು. ಪ್ರೇಮಿಗಳು ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿ ಸತಿ-ಪತಿಗಳಾದರು. ಮಹಿಳಾ ಸಾಂತ್ವಾನ ಕೇಂದ್ರ ಅಂತರ್ ಧರ್ಮೀಯ ವಿವಾಹಕ್ಕೆ ಕಲ್ಯಾಣ ಮಂಟಪವಾದರೆ, ಸಾಂತಾನ್ವ ಕೇಂದ್ರದ ಅಧ್ಯಕ್ಷರದ್ದೇ ಪೌರೋಹಿತ್ಯ!
ತಾಲೂಕಿನ ಕುಂಭಾಶಿ ವಿನಾಯಕ ನಗರ ಜನತಾ ಕಾಲನಿ ನಿವಾಸಿ ವಿವೇಕ ಹಾಗೂ ಅದೇ ಕಾಲನಿ ನಿವಾಸಿ ಸಲ್ಮಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು. ಅವರಿಬ್ಬರೂ ಅಕ್ಕಪಕ್ಕದ ಮನೆಯವರು. ಎರಡು ವರ್ಷದ ಹಿಂದೆ ಮದುವೆಯಲ್ಲಿ ಹುಟ್ಟಿದ ಪ್ರೇಮಾ ಮದುವೆಯಲ್ಲಿ ಮುಕ್ತಾಯಗೊಂಡಿದೆ.
ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರಾಧಾದಾಸ್ ಪೌರೋಹಿತ್ಯದಲ್ಲಿ ಹುಡುಗನ ತಂದೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹಾರ ಬದಲಾಯಿಸಿ, ತಾಳಿಕಟ್ಟಿ ಸರಳ ವಿವಾಹ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಕುಂಭಾಸಿ ವಿನಾಯಕ ನಗರದ ನಿವಾಸಿ ಬಾಬು ಮತ್ತು ಶಾರದಾ ಮೂವರು ಮಕ್ಕಳಲ್ಲಿ ವಿವೇಕ್ ಕುಂದಾಪುರ ವುಡ್‌ಶ್ಯಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಬ್ದುಲ್ ಖಲೀಲ್ ಮತು ಝೈನಾಬಿ ಇಬ್ಬರು ಹೆಣ್ಣುಮಕ್ಕಳಲ್ಲಿ ಕೊನೆಯವಳಾದ ಸಲ್ಮಾ ಕೋಟೇಶ್ವರ ಕೆನರಾ ಕಿಡ್ಸ್ ವಾಹನದಲ್ಲಿ ಸಹಾಯಕಿಯಾಗಿ ದುಡಿಯುತ್ತಿದ್ದರು.
ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದ ನಂತರ ಹುಡಗನ ಕಡೆಯವರು ಮದುವೆಗೆ ಒಪ್ಪಿಗೆ ಕೊಟ್ಟರೂ, ಸಲ್ಮಾ ಮನೆಯವರು ವಿರೋಧಿಸಿದರು. ಮದುವೆ ಆಗೋದೆ ಆದ್ರೇ ಹುಡುಗ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕೆಂಬ ತಾಕೀತು ಮಾಡಿದರು. ಹುಡುಗನ ಪೋಷಕರು ಮಗ ಹೇಗಾದರೂ ಇರಲಿ ಎಂದು ಮತಾಂತರಕ್ಕೆ ಒಪ್ಪಿದರು. ಯುವಕನಿಗೆ ಒಪ್ಪಿಗೆ ಆಗಲಿಲ್ಲ. ಇದ್ಯಾವುದಕ್ಕೂ ಸೊಪ್ಪು ಹಾಕದ ಸಲ್ಮಾ ಮದುವೆಯಾದರೆ ವಿವೇಕನನ್ನೇ ಎಂಬ ಹಟಕ್ಕೆ ಬಿದ್ದರು. ಸಲ್ಮಾಗೆ ಮನೆಯವರು ಹಾಗೂ ಅವರ ಧರ್ಮದ ಮುಖಂಡರು ಮದುವೆಗೆ ಒಪ್ಪಿಗೆ ಕೊಡದೆ ಟಾರ್ಚರ್ ಜಾಸ್ತಿಯಾದಾಗ ಆಕೆ ಹಾಗೂ ವಿವೇಕ್ ಕುಂದಾಪುರದ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರ ಸಹಾಯ ಕೇಳಿ ಬಂದರು. ರಾಧಾದಾಸ್ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಅಧ್ಯಕ್ಷೆ ರಾಧಾದಾಸ್ ಬೆಂಬಲಕ್ಕೆ ನಿಲ್ಲುತ್ತಾರೆ. ಎರಡೂ ಕುಂಟುಂಬದವರ ಕರೆಯಿಸಿ ರಾಜ ಸಂಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಯುವಕನ ಕಡೆಯವರು ಒಪ್ಪಿದರೂ, ಯುವತಿ ಮನೆಯವರು ಒಪ್ಪಲ್ಲ. ಪ್ರೀತಿಗೆ ಅಡ್ಡ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದ ನಂತರ ಮದುವೆ ಮಾಡಿಸುವ ಭರವಸೆ ರಾಧಾದಾಸ್ ನೀಡುತ್ತಾರೆ. ಒಟ್ಟಾರೆ ಜಾತಿ ಧರ್ಮದ ಎಲ್ಲೆ ಮೀರಿ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇಬ್ಬರ ಜೀವ ಉಳಿಸುವ ಸಲುವಾಗಿ ಮದುವೆ ಮಾಡುವ ನಿರ್ಧಾರಕ್ಕೆ ಬರಲಾಯಿತು. ಇಬ್ಬರ ಮನ ಒಲಿಸುವ ಪ್ರಯತ್ನ ಮಾಡಿದರೂ ಫಲ ಕೊಡಲಿಲ್ಲ. ಹಿಂದೂ ಧರ್ಮದಂತೆ ಸರಳ ವಿವಾಹ ನಡೆದರೂ, ಕೂನೂನು ರೀತಿಯಲ್ಲಿ ವಿವಾಹ ನೊಂದಾವಣಿ ಮಾಡಲಾಗುತ್ತದೆ. ಜಾತಿಗಿಂತ ಬದುಕು ದೊಡ್ಡದು.– ರಾಧಾದಾಸ್, ಅಧ್ಯಕ್ಷೆ ಮಹಿಳಾ ಸಂತ್ವಾನಕೇಂದ್ರ ಕುಂದಾಪುರ