ಸಂಘಟಿತ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣ ಸಾಧ್ಯ: ಕೆ. ಗೋಪಾಲ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳವಾಡಿ ಮಾರಿಕಾಂಬಾ ದೇವಸ್ಥಾನ ಧಾರ್ಮಿಕ ಐತಿಹ್ಯ ಹೊಂದಿರುವ ಕ್ಷೇತ್ರವಾಗಿದ್ದು ಸಾವಿರಾರು ಭಕ್ತರು ನಂಬಿ ಬಂದಿದ್ದಾರೆ. ಊರಿನವರ ಸಂಘಟಿತರಾಗಿ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡ ಭವ್ಯ ಮಂದಿರ ನಿರ್ಮಾಣ ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಅಮೂಲಾಗ್ರ ಜೀರ್ಣೋದ್ದಾರದ ಪ್ರಯುಕ್ತ ನಿರ್ಮಾಣವಾಗಲಿರುವ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವಸ್ಥಾನಗಳ ಜೀರ್ಣೋದ್ದಾರದಿಂದ ಊರಿಗೆ ಶ್ರೇಯಸ್ಸು. ಕರಾವಳಿಯ ಹಲವು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿದ್ದು ಉಚ್ರಾಯ ಸ್ಥಿತಿಯಲ್ಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಅಪಣ್ಣ ಹೆಗ್ಡೆ, ಮಾಜಿ ರೋಟರಿ ಗವರ್ನರ್ ಜಗನ್ನಾಥ ಶೆಟ್ಟಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಹರೀಶ್ ಶೆಟ್ಟಿ, ಮಾಜಿ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ, ಬ್ಯೆ.ವ್ಯ.ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ, ಪ್ರಥಮ ದರ್ಜೆ ಗುತ್ತಿಗೆದಾರ ಜಗನ್ನಾಥ ಶೆಟ್ಟಿ, ಜಿ.ಪಂ ಸದಸ್ಯ ಶಂಕರ ಪೂಜಾರಿ, ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್. ರಾಜು ಪೂಜಾರಿ, ಗ್ರಾ.ಪಂ ಸದಸ್ಯ ವೆಂಕ್ಟ ಪೂಜಾರಿ, ತಾ.ಪಂ ಸದಸ್ಯೆ ಮಾಲತಿ, ಸೀನಿಯರ್ ಸಿಟಿಜನ್ ಅಶೋಷಿಯೇಷನ್ ಅಧ್ಯಕ್ಷ ವಸಂತ ಹೆಗ್ಢೆ, ಮಂಜು ಮೊಗವೀರ ಯಡ್ತರೆ, ಪ್ರಥಮ ದರ್ಜೆ ಗುತ್ತಿಗೆದಾರ ಮುತ್ತಯ್ಯ ಪೂಜಾರಿ, ಉದಯ ಶೇಟ್ ಮಯ್ಯಾಡಿ, ನಿವೃತ್ತ ಅದ್ಯಾಪಕ ನಾಗಯ್ಯ ದೇವಾಡಿಗ ಕಳವಾಡಿ, ಸುಬ್ಬಣ್ಣ ಶೆಟ್ಟಿ ಕಳವಾಡಿ, ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಕರುಣಾಕರ ಶೆಟ್ಟಿ ಕಳವಾಡಿ, ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ, ಅಧ್ಯಕ್ಷ ರವೀಂದ್ರ ಶೆಟ್ಟಿ ಕಾರಿಕಟ್ಟೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿವಾಕರ ಹೆಗಡೆ, ಸಂಜೀವ ಆಚಾರ್ ಮುಂತಾದವರು ಉಪಸ್ಥಿತರಿದ್ದರು.
ವೇದಮೂರ್ತಿ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ ಶುಭಾಶಂಸನೆಗೈದರು. ಯುವ ಸಮಿತಿ ಕಳವಾಡಿ ಅಧ್ಯಕ್ಷ ಬ್ಯೆರಿ ನಾಗರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮ ಮೊಗವೀರ ಸ್ವಾಗತಿಸಿದರು. ಶಿಕ್ಷಕ ಆನಂದ ಮದ್ದೋಡಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ ರಾಮಕುಮಾರ್ ವಂದಿಸಿದರು.