ಸ್ಪಷ್ಟ ಗುರಿಯಿದ್ದರೆ ಯಶಸ್ವು ಸಾಧ್ಯ: ಎನ್. ಕೆ ಬಿಲ್ಲವ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳು ಉನ್ನತ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯವಿದೆ. ಬಡತನದಲ್ಲಿ ಹುಟ್ಟುವುದು ಸಹಜ ಆದರೆ ಬಡತನದಲ್ಲಿ ಬದುಕು ಅಂತ್ಯವಾಗಬಾರದು. ಪ್ರತಿಭೆಗೆ ಯಾವುದೇ ಬಡತನವಿಲ್ಲ. ಅದನ್ನು ಸದುಪಯೋಗಪಡಿಸಿಕೊಳ್ಳುವ ಚಾಕಚಕ್ಯತೆಯನ್ನು ಕರಗತಗೊಳಿಸಿಕೊಳ್ಳಬೇಕು ಎಂದು ಶಾಲಾ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಸಂಸ್ಥಾಪಕ ಎನ್.ಕೆ. ಬಿಲ್ಲವ ಹೇಳಿದರು.
ಅವರು ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೬ ಅಂಕ ಪಡೆದ ವಿದ್ಯಾರ್ಥಿನಿ ಶ್ವೇತಾ ನಾಗಪ್ಪ ಹೆಬ್ಬಾರ್ ಅವರಿಗೆ ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಶಾಲಾ ಸಮಯದಲ್ಲಿ ಆಯಾ ದಿನದ ಪಠ್ಯ ಕ್ರಮವನ್ನು ಅದೇ ದಿನವೇ ಅಭ್ಯಾಸ ನಡೆಸುವುದರಿಂದ ಪರೀಕ್ಷೆಯನ್ನು ಎದುರಿಸಲು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಇಂದಿನ ಪೈಪೋಟಿಯುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯವಶ್ಯವಾಗಿದೆ. ನಮ್ಮ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೋತ್ಸಾಹಗಳನ್ನು ಮಾಡುವ ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಶುಭದಾ ಸಂಸ್ಥೆಯ ಶುಭದಾ ಎನ್. ಬಿಲ್ಲವ, ತಾ.ಪಂ. ಸದಸ್ಯೆ ಶ್ಯಾಮಲ ಕುಂದರ್, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಗುರುನಿತ್ಯಾನಂದ ಕ್ರೆಡಿಟ್ ಕೋ-ಅಪರೇಟಿವ್ ಉಪಾಧ್ಯಕ್ಷ ತೇಜಪ್ಪ ಶೆಟ್ಟಿ , ಟ್ರಸ್ಟಿ ಮಂಜು ಪೂಜಾರಿ, ಎ. ಪುಂಡಲೀಕ ನಾಯಕ್, ಗರಡಿ ಅಧ್ಯಕ್ಷ ಮುತ್ತ ಬಿಲ್ಲವ, ಕಾರ್ಯದರ್ಶಿ ಶೇಖರ ಪೂಜಾರಿ, ಶಂಕರ ಪೂಜಾರಿ, ಎ.ಬಿ.ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲಾ ಶಿಕ್ಷಕ ಗೋವಿಂದ ರಾಜು ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.
► ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶಾಕಿರಣ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆ – http://kundapraa.com/?p=14712