ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದದ ಶ್ರೀ ರಾಮ ಭಜನಾ ಮಂದಿರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ನಾವುಂದ, ಶುಭದಾ ಎಜ್ಯುಕೇಶನ್ ಟ್ರಸ್ಟ್ (ರಿ) ನಾವುಂದ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಾವುಂದ, ಶ್ರೀ ಗುರು ನಿತ್ಯಾನಂದ ಸೌಹಾರ್ದ ಸಹಕಾರಿ ನಾವುಂದ ಆಶ್ರಯದಲ್ಲಿ ನಾವುಂದ ಗ್ರಾಮದ ಬಿಲ್ಲವ ಸಮಾಜದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘ ನಾವುಂದ ಇದರ ಅಧ್ಯಕ್ಷರಾದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶುಭದಾ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎನ್.ಕೆ.ಬಿಲ್ಲವ ಉಪಾಧ್ಯಕ್ಷರಾದ ಶುಭದಾ ಎನ್. ಬಿಲ್ಲವ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಾವುಂದ ಇದರ ಅಧ್ಯಕ್ಷರಾದ ಮುತ್ತ ಬಿಲ್ಲವ, ಗರಡಿ ಆಡಳಿತ ಮೊಕ್ತೇಶ್ವರ ಶೇಖರ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ ಪೂಜಾರಿ ಹಾಗೂ ಮಹೇಂದ್ರ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಇದರ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಸಿಂಗಾರಿ ಪೂಜಾರಿ ಉಪಸ್ಥಿತರಿದ್ದರು. ಶಂಕರ ಎಸ್. ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಕೆ. ಪೂಜಾರಿ ಧನ್ಯವಾದ ಮಾಡಿದರು.