ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಕಾರ್ಯಕರ್ತರು ಗಂಗೊಳ್ಳಿಯ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛತೆ ಮಾಡಿ ವೀರ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಖಾರ್ವಿ ದಾಮನಮನೆ ಮತ್ತು ನಿತ್ಯಾನಂದ ಖಾರ್ವಿ ಮ್ಯಾಂಗನೀಸ್ ರೋಡ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಎಲ್ಲಾ ಕಾರ್ಯಕರ್ತರು ಭಾರತ ಮಾತೆಯ ಮತ್ತು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಾಮೂಹಿಕವಾಗಿ ದೀಪ ಬೆಳಗಿ ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.
ನವೀನ್ ದೊಡ್ಡಹಿತ್ಲು, ರಾಘವವೇಂದ್ರ ಖಾರ್ವಿ, ರವಿ ಖಾರ್ವಿ, ರಂಜಿತ್ ಖಾರ್ವಿ, ವೆಂಕಟೇಶ ಬೇಲಿಕೇರಿ, ಮಂಜುನಾಥ ಖಾರ್ವಿ, ದಿಲೀಪ ಪೂಜಾರಿ, ಅನುಪ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.