ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಶ್ವ ಪರಿಸರ ದಿನದ ಅಂಗವಾಗಿ ಪಡುವರಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಮೀಪದ ಸ.ಹಿ.ಪ್ರಾ.ಶಾಲೆ ಕೋಟೆಬಾಗಿಲು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಪಡುವರಿ ಗ್ರಾ ಪಂ ಅಧ್ಯಕ್ಷೆ ದೀಪಾ ಶೆಟ್ಟಿ ಹಾಗೂ ಉಪಾಧ್ಯಕ್ಷ ಸದಾಶಿವ ಡಿ ಪಡುವರಿ ಹಾಗೂ ಗೀಡಗಳನ್ನು ನೆಟ್ಟರು. ಕೋಟೆಬಾಗಿಲು ಶಾಲೆ ಮುಖ್ಯೋಪಾಧ್ಯಾಯ ಸುರೇಶ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಬ್ಬಾರ್, ದ್ವೀತಿಯ ದರ್ಜೆ ಲೆಕ್ಕ ಪರಿಶೋದಕ ಸಹಾಯಕಿ ಜಯಲಕ್ಷ್ಮೀ ಸಿ ವಿ, ಗ್ರಾ ಪಂ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.