ಒತ್ತಿನಣೆಯಲ್ಲಿ ಸತತ ಗುಡ್ಡ ಕುಸಿತ: ಜಿಲ್ಲಾಧಿಕಾರಿ ಭೇಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿಯಲ್ಲಿ ಆರಂಭಗೊಂಡಿರುವ ಮುಂಗಾರು ಮಳೆಗೆ ಹೆದ್ದಾರಿ ಕಾಮಗಾರಿಗಾಗಿ ಅವ್ಶೆಜ್ಞಾನಿಕವಾಗಿ ಕೊರೆದಿರುವ ಒತ್ತಿನೆಣೆ ಗುಡ್ಡವು ಸತತವಾಗಿ ಕುಸಿಯುತ್ತಿದೆ. ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಿನವೂ ವ್ಯತ್ಯಯಗೊಳ್ಳುತ್ತಿದೆ. ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕುಂಟುಮಾಡಿದೆ.

Call us

Click Here

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ:
ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ್ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚತುಷ್ಪತ ಹೆದ್ದಾರಿಯ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವ ಬಗ್ಗೆ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡ ಇಬ್ಬಾಗ ಮಾಡುವಾಗ ಸಂಬಂಧಿತ ಗುತ್ತಿಗೆದಾರ ಕಂಪೆನೆ ಮುಂಜಾಗೃತ ಕ್ರಮ ಕೈಗೊಳ್ಳದ ಹಿನ್ನೆಯಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೊಡಕ್ಕಾಗಿದೆ, ಈ ಬಗ್ಗೆ ಈಗಾಗಲೇ ಸಂಬಂಧಿತ ಕಂಪೆನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ, ಅಲ್ಲದೇ ಗುಡ್ಡ ಕುಸಿತ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ ಎಂದರು.

ಬದಲಿ ಮಾರ್ಗವಾಗಿ ಮದ್ದೋಡಿ -ಜೋಗುರು ರಸ್ತೆ ಹಾಗೂ ದೊಂಬೆ- ಕರಾವಳಿ ರಸ್ತೆಯನ್ನು ಮುಂದಿನ ೧೦ ದಿನದೊಳಗೆ ದುರಸ್ತಿ ಮಾಡುವಂತೆ ಗುತ್ತಿಗೆದಾರ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶಿಸಿದ್ದು, ಗುಡ್ಡದ ಜೇಡಿ ಮಿಶ್ರಿತ ಮಣ್ಣು ನುಗ್ಗಿ ಈ ಭಾಗದ ನೂರಾರು ಏಕ್ರೆ ಕೃಷಿ ಭೂಮಿ ಹಾನಿಗೀಡಾಗಿದ್ದು, ಹಾನಿಗೀಡಾದ ಕೃಷಿ ಭೂಮಿಯ ಮಹಜರು ನಡೆಸುವಂತೆ ಈಗಾಗಲೇ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಅವರ ವರದಿ ಆಧರಿಸಿ ಎಲ್ಲಾ ಕೃಷಿ ಭೂಮಿಗೂ ಗುತ್ತಿಗೆದಾರ ಕಂಪೆನಿಯಿಂದಲೇ ಪರಿಹಾರದ ಮೊತ್ತ ಭರಿಸಲಾಗುವುದು ಎಂದರು. ಬಳಿಕ ಬದಲಿ ಮಾರ್ಗವಾದ ದೊಂಬೆ – ಕರಾವಳಿ ರಸ್ತೆಯನ್ನು ಪರಿಶೀಲಿಸಿದರು.ಎಸಿ ಶಿಲ್ಪನಾಗ್, ಕುಂದಾಪುರ ತಹಶೀಲ್ದಾರ್ ಬೋರ್ಕರ್, ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಉಪಸ್ಥಿತರಿದ್ದರು.

 

Leave a Reply