ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುತ್ತಿದ್ದ ಯುವಕ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ಘಟನೆ ಭಾನುವಾರ ಕಾಲ್ತೋಡಿನಲ್ಲಿ ನಡೆದಿದೆ. ಇಲ್ಲಿನ ಯಡೇರಿ ಹೊಸಮನೆ ನಿವಾಸಿ ಹರೀಶ ದೇವಾಡಿಗ (೩೪) ಕಲ್ಸಂಕ ಹಳ್ಳವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ನೀರಿನ ರಭಸಕ್ಕೆ ಕಾಲು ಜಾರಿ ಸೆಳೆದೊಯ್ಯಲ್ಪಟ್ಟರು. ಸೋಮವಾರವೂ ಸ್ಥಳೀಯರು ಮತ್ತು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದರು. ಸಂಜೆಯ ತನಕ ಅವರು ಪತ್ತೆಯಾಗಿಲ್ಲ. ಘಟನೆ ಬಗ್ಗೆ ಅವರ ಭಾವ ರಘುರಾಮ ದೇವಾಡಿಗ ಬೈಂದೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಯುವಕನಿಗೆ ಪತ್ನಿ, ಶಾಲೆಗೆ ಹೋಗುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ.
ಶಾಸಕರ ಭೇಟಿ: ಸುದ್ದಿ ತಿಳಿದ ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ಹುಡುಕಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿನೀಡಿ ಬಂಧುಗಳು ಮತ್ತು ಸ್ಥಳೀಯರಿಂದ ಘಟನೆ ಮತ್ತು ಹುಡುಕಾಟದ ವಿವರ ಪಡೆದು ಅವರಲ್ಲಿ ಧೈರ್ಯ ತುಂಬಿದರು.