ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ೧೫ನೇ ವರ್ಷದ ನೂತನ ಅಧ್ಯಕ್ಷರಾಗಿ ಮಹೇಶ ಗಾಣಿಗ ಅಬ್ಬಿ, ಕಾರ್ಯದರ್ಶಿಯಾಗಿ ಸೀತಾರಾಮ ಪೂಜಾರಿ ತೆಂಕೊಡಿಗೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿಠಲ ಆಚಾರ್ಯ, ಉಪಾಧ್ಯಕ್ಷರಾಗಿ ಉದಯ ಕೆ.ನಾಯ್ಕ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ವಿ.ಕೆ.ಶಿವರಾಮ ಶೆಟ್ಟಿ, ರುದ್ರಯ್ಯ ಆಚಾರ್ಯ, ಶಶಿಧರ ಶೆಟ್ಟಿ ಕೊರಾಡಿಮನೆ, ಜತೆ ಕಾರ್ಯದರ್ಶಿಯಾಗಿ ವಿಜಯ ಎಚ್.ಪೂಜಾರಿ ತೆಂಕೊಡಿಗೆ, ಖಜಾಂಚಿಯಾಗಿ ಗುಂಡು ಪೂಜಾರಿ ಹರಾವರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತರಾಜ ಶೆಟ್ಟಿ, ಶರತ್ ಬಿಲ್ಲಾ, ಕ್ರೀಡಾಕಾರ್ಯದರ್ಶಿಯಾಗಿ ಹನೀಫ್ ಸಾಹೇಬ್ ವಂಡ್ಸೆ, ಅಬಿಜಿತ್ ಶಾರ್ಕೆ, ಲೆಕ್ಕ ಪರಿಶೋಧಕರು-ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಸಂಜೀವ ಪೂಜಾರಿ, ಸುಧಾಕರ ಪೂಜಾರಿ, ಎಲ್.ಎನ್.ಆಚಾರ್ ಆತ್ರಾಡಿ, ಶಂಕರ ಆಚಾರ್ಯ ವಂಡ್ಸೆ, ವಾಸು ಜಿ.ನಾಯ್ಕ, ಗಣೇಶ ದೇವಾಡಿಗ ಅಡಿಕೆಕೊಡ್ಲು, ಸತೀಶ ಚಂದನ್, ಗೌರವ ಸಲಹೆಗಾರರು- ಶಶಿಧರ್ ಶೆಟ್ಟಿ ಪಠೇಲರಮನೆ, ಗೋಪಾಲ ಶೆಟ್ಟಿ ಕೊಳ್ತಾ, ಗೋವರ್ಧನ್ ಜೋಗಿ, ಮಂಜುನಾಥ ಗಾಣಿಗ ಅಡಿಕೆಕೊಡ್ಲು, ರಾಜು ಸೀತಾ-ಗೀತಾ, ದಾಮೋದರ, ರಾಜಶೇಖರ ಉಪಾಧ್ಯ, ಗೋಪಾಲಕೃಷ್ಣ ಉಪಾಧ್ಯ ಆಯ್ಕೆಯಾಗಿದ್ದಾರೆ.