ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾನುವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕ್ಷೇತ್ರಕ್ಕೆ ಆಗಮಿಸಿದ್ದ ರಾಷ್ಟ್ರಪತಿಯವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಆದರದಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯದ ಸಚಿವರುಗಳಾದ ರುದ್ರಪ್ಪ ಲಮಾಣಿ, ಕೆ.ಜೆ ಜಾರ್ಜ್, ಪ್ರಮೋದ್ ಮಧ್ವರಾಜ್, ಬೈಂದೂರು ಕ್ಷೇತ್ರ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಅರ್ಚಕರುಗಳು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ.
ಉಡುಪಿಯಿಂದ ಕೊಲ್ಲೂರು ತನಕ ಬೀಗಿ ಭದ್ರತೆ:
ಬೆಳಿಗ್ಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ್ದ ರಾಷ್ಟ್ರಪತಿಗಳು ಉಡುಪಿಯಲ್ಲಿ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಗೂ ಉಡುಪಿ ಶ್ರೀ ಕೃಷ್ಟ ಮಠದ ದರ್ಶನ ಪಡೆದರು. ವಿಶ್ರಾಂತಿ ಪಡೆದ ಬಳಿಕ ಅಲ್ಲಿಂದ ಕೊಲ್ಲೂರಿಗೆ ಆಗಮಿಸಿ ಮರಳಿ ರಸ್ತೆ ಮಾರ್ಗವಾಗಿ ಉಡುಪಿಗೆ ಬಳಿಕ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದರು.
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷ ಭದ್ರತೆಯನ್ನು ಆಯೋಜಿಸಲಾಗಿತ್ತು. ವಾರಗಳಿಂದ ವಿಶೇಷ ತಯಾರಿ ನಡೆಸಲಾಗಿತ್ತು. ಅರೆಶಿರೂರಿನಲ್ಲಿ ನೂತನ ಎರಡು ಹೆಲಿಪ್ಯಾಡ್ ಕೂಡ ನಿರ್ಮಿಸಲಾಗಿತ್ತು. ಉಡುಪಿ ಹೆಮ್ಮಾಡಿ ಕೊಲ್ಲೂರು ಮಾರ್ಗದ ಹೆದ್ದಾರಿಯನ್ನು ರಾಷ್ಟ್ರಪತಿ ಆಗಮಿಸುವ ಸಂದರ್ಭ ಜೀರೋ ಟ್ರಾಫಿಕ್ ಮಾಡಲಾಗಿತ್ತು. ಭದ್ರತೆಯ ದೃಷ್ಠಿಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.




ಉಡುಪಿ ಕೃಷ್ಣಮಠ ಭೇಟಿ, ಆಸ್ಪತ್ರೆಗೆ ಶಿಲನ್ಯಾಸ:



















