ಯೋಗಾಯೋಗ: ಕುಂದಾಪುರ ತಾಲೂಕಿನ ವಿವಿಧೆಡೆ ಯೋಗ ದಿನಾಚರಣೆ, ತರಬೇತಿ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗಂಗೊಳ್ಳಿ ಸ್ಥಾನೀಯ ಸಮಿತಿ ವತಿಯಿಂದ ಯೋಗ ತರಬೇತಿ ಕಾರ್ಯಕ್ರಮ ಬುಧವಾರ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಜರಗಿತು.

Call us

Click Here

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯೋಗ ತರಬೇತುದಾರ ರಾಜು ಕೋಟೇಶ್ವರ ಅವರು ಯೋಗ ತರಬೇತಿ ನೀಡಿದರು. ಬಳಿಕ ಮಾತನಾಡಿದ ಅವರು ಮನೋದೈಹಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಅಸ್ತಮಾಗಳಂತಥವುಗಳಿಂದ ಸಂಪೂರ್ಣವಾಗಿ ಹೊರಬರಲು ಯೋಗ ರಾಮಬಾಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ, ಔದ್ಯೋಗಿಕವಾಗಿ ಔನ್ನತ್ಯ ಸಾಧಿಸಲು ಹಾಗೂ ಉತ್ತಮ ಸಂಪಾದನೆಗೂ ಅತೀ ಸಹಾಯಕವಾಗಿದೆ. ಸ್ಪರ್ಧಾತ್ಮಕ ಒತ್ತಡ ಯುಗದಲ್ಲಿ ಮನಸ್ಸಿನ ಒತ್ತಡವನ್ನು ದೂರ ಮಾಡಲು ಯೋಗಾಭ್ಯಾಸ ಸಹಾಯಕವಾಗಲಿದೆ ಎಂದರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಹಸಂಚಾಲಕ ವಾಸುದೇವ ದೇವಾಡಿಗ, ಬಿಜೆಪಿ ಗಂಗೊಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ, ಕಾರ್ಯದರ್ಶಿ ಬಿ.ಗಣೇಶ ಶೆಣೈ, ಮುಖಂಡರಾದ ಉಮಾನಾಥ ದೇವಾಡಿಗ, ಶ್ರೀಧರ ನಾಯ್ಕ್, ಮಂತಿ ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

ಶಾಲೆಯ ಮುಖ್ಯಶಿಕ್ಷಕಿ, ಯೋಗ ತರಬೇತುದಾರರಾದ ಸಮನಾ ಪಡಿಯಾರ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಯೋಗ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲೆಯ ಶಿಕ್ಷಕ ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಸದಸ್ಯರಾದ ರವೀಂದ್ರ ಪಟೇಲ್, ಶಾಲೆಯ ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಗಂಗೊಳ್ಳಿ : ಇಂದಿನ ಯಾಂತ್ರಿಕ ಸ್ಪರ್ಧಾತ್ಮಕ ದಿನಗಳಲ್ಲಿ ಉದ್ಯೋಗದ ಒತ್ತಡ, ಸಾಮಾಜಿಕ ಜಾಲತಾಣಗಳಿಂದ ಮನಸ್ಸಿನಲ್ಲಿ ಬರುವ ಆಲೋಚನೆಗಳು ಹೆಚ್ಚುತ್ತಿವೆ. ಅನಗತ್ಯ ಆಲೋಚನೆಗಳು ಹೆಚ್ಚಾಗುತ್ತಿದ್ದು, ದೈಹಿಕ ಪರಿಶ್ರಮದ ಕೆಲಸಗಳು ಕಡಿಮೆಯಾಗಿದೆ. ಹೀಗಾಗಿ ಬಹಳ ಸುಲಭವಾಗಿ ಶರೀರಕ್ಕೆ ವ್ಯಾಯಾಮ, ಮನಸ್ಸಿಗೆ ವಿಶ್ರಾಂತಿ ಎರಡನ್ನು ಕೊಡುವಂತಹ ಚಟುವಟಿಕೆಯ ಅನಿವಾರ್ಯತೆ ಇದೆ. ಅದು ಯೋಗದಿಂದ ಮಾತ್ರ ಸಾಧ್ಯ ಎಂದು ದಿ ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕ ದಿನೇಶ ಮೊಗವೀರ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಟೆಂಪಲ್ ಆಫ್ ನಾಲೆಡ್ಜ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ, ವ್ಯಕ್ತಿ ವಿಕಾಸ ಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ೨೦೧೭ರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಜರಗಿದ ಯೋಗ ಮತ್ತು ಪ್ರಾಣಾಯಾಮ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿ ಮಾತನಾಡಿದರು.

Click here

Click here

Click here

Click Here

Call us

Call us

ಯೋಗದ ಅಂಗಗಳಾದ ಆಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳ ಅಭ್ಯಾಸದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಆದ್ದರಿಂದ ಯೋಗ ಅಭ್ಯಾಸ ದೈನಂದಿನ ಚಟುವಟಿಕೆಯ ಭಾಗವಾಗಲೇಬೇಕಾದ ವಸ್ತುಸ್ಥಿತಿ ಜನರಿಗೆ ಅರಿವಾಗಿದೆ. ಹಾಗಾಗಿ ಯೋಗಾಭ್ಯಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ ಎಂದು ಅವರು ಹೇಳಿದರು.

ಗಂಗೊಳ್ಳಿ ಟೆಂಪಲ್ ಆಫ್ ನಾಲೆಡ್‌ನ ಜಿ.ಪುರುಷೋತ್ತಮ ಆರ್ಕಾಟಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಸುರೇಶ ಜಿಎಫ್‌ಸಿಎಸ್, ಶಿವಪ್ಪ ಖಾರ್ವಿ, ಪಾಂಡುರಂಗ ಖಾರ್ವಿ, ರಮೇಶ ಆರ್ಕಾಟಿ, ವಿದ್ಯಾ ಶ್ರೀನಿವಾಸ, ಪಾಂಡು ಖಾರ್ವಿ ಗುಡ್ಡೆಕೇರಿ, ಸುರೇಶ ಚೌಕಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು: ಮನಸು ಸ್ಥಿರವಾಗಿದ್ದರೆ ಆತ್ಮಶಕ್ತಿ ವೃದ್ಧಿಸುತ್ತದೆ. ಯೋಗ, ಪ್ರಾಣಾಯಾಮಗಳನ್ನು ಮಾಡುವುದರಿಂದ ಮನಸ್ಸನ್ನು ಕೇಂದ್ರಿಕರಿಸಬಹುದು. ಅಜೀವ ಪರ್ಯಂತ ದಿನನಿತ್ಯವೂ ಯಾರು ಯೋಗಾಭ್ಯಾಸ ಮಾಡುತ್ತಾರೋ ಅವರು ಯೋಗಿಗಳಾಗುತ್ತಾರೆ ಎಂದು ಯೋಗಶಿಕ್ಷಕಿ ಭಾರತಿ ಎಂ. ಬಿಜೂರು ಹೇಳಿದರು.

ಉಪ್ಪುಂದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹಲವಾರು ವರ್ಷಗಳ ತಪಸ್ಸು ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಧನಾತ್ಮಕ ಚಿಂತನೆಗಳಿಂದ ಭಾರತದ ಪ್ರಾಚೀನ ವಿದ್ಯೆ ಯೋಗವನ್ನು ಇಂದು ವಿಶ್ವವೇ ಒಪ್ಪಿಕೊಂಡು ಅನುಸರಿಸುತ್ತಿದೆ ಎಂದ ಅವರು ನಾವು ಮಾಡುವ ಯಾವುದೇ ಧನಾತ್ಮಕ ಚಟುವಟಿಕೆಗಳನ್ನು ಚಿತ್ತಶುದ್ಧಿಯಿಂದ ಮಾಡಿದರೆ ಸಾರ್ಥಕತೆ ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲಾ ಮುಖ್ಯಶಿಕ್ಷಕ, ಸಹಾಯಕ ಶಿಕ್ಷಕ, ಶಿಕ್ಷಕಿಯರು, ಎಸ್‌ಡಿಎಂಸಿ ಅಧ್ಯಕ್ಷ ಯು. ರಾಜಾರಾಮ ಪಡಿಯಾರ್ ಉಪಸ್ಥಿತರಿದ್ದರು. ಸರಕಾರಿ ಉಪ್ಪುಂದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಭಾರತಿ ಎಂ. ಬಿಜೂರು ಪ್ರತೀದಿನ ಶಾಲಾರಂಭಕ್ಕೂ ಮುನ್ನ ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ನಾನು ವಿದ್ಯಾಥಿಗಳಿಗೆ ಪಾಠದ ಜೊತೆಗೆ ಸೇವಾ ರೂಪದಲ್ಲಿ ಯೋಗವನ್ನು ಹೇಳಿಕೊಡುತ್ತಿದ್ದೇನೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ, ಲವಲವಿಕೆ ಹಾಗೂ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ನನಗೂ ಆತ್ಮಸಂತೋಷವಿದೆ ಎಂದರು.

Leave a Reply