ಕುಂದಾಪ್ರ ಡಾಟ್ ಕಾಂಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ವತಿಯಿಂದ ಕುಂದಾಪುರದ ಸೈಂಟ್ ಮೇರಿಸ್ ಪ. ಪೂ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಸೋನು ಸಿಜೆ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ, ಉದ್ಯಮಿಗಳಾದ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್‌ನ ದಾಮೋದರ ಪೈ, ಪ್ರವೀಣ್ ಕುಮಾರ್ ಟಿ, ಎಚ್.ಎಸ್. ಹತ್ವಾರ್, ರಾಘವೇಂದ್ರ ಚರಣ ನಾವಡ, ಪ್ರಶಾಂತ ಹವಾಲ್ದಾರ್, ಜಾಯ್ ಕರ್ವೇಲ್ಲೊ, ಅನಿಲ್ ಡಿಸೋಜಾ, ಮಂಜುಳ ನಾಯರ್ ಇನ್ನಿತರರು ಉಪಸ್ಥಿತರಿದ್ದರು.