ಮಯ್ಯಾಡಿ: ಚರಂಡಿ ಅವ್ಯವಸ್ಥೆಯಿಂದ ರಸ್ತೆ ಮೇಲೆ ನೀರು. ಆತಂಕದಲ್ಲಿ ಆಸುಪಾಸಿನ ನಿವಾಸಿಗಳು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡ್ತರೆ ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಮಯ್ಯಾಡಿ ಸೊಸೈಟಿ, ಶಾಲೆ ಸಮೀಪ, ಮೂರು ಕೈ ಹಾಗೂ ತಗ್ಗರ್ಸೆ ಮಯ್ಯಾಡಿ ಸೇತುವೆ ಸಮೀಪ ಸೇರಿದಂತೆ ಮುಂತಾದೆಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆಯೇ ನೀರು ನಿಂತು ಆಸುಪಾಸಿನ ಮನೆಯವರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Call us

Click Here

ಮಳೆಗಾಲಕ್ಕೂ ಮುಂಚೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ರಾಜ್ಯ ಹೆದ್ದಾರಿ ಇದ್ದದ್ದು ಈಗ ರಾಷ್ಟ್ರೀಯ ಹೆದ್ದಾರಿಯಾಗಿದೆ) ಚರಂಡಿ ದುರಸ್ತಿಗೊಳಿಸಬೇಕಿತ್ತು. ಆದರೆ ಗುತ್ತಿಗೆದಾರರು ಈವರೆಗೂ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ತಳೆದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಮಯ್ಯಾಡಿ ಸೊಸೈಟಿ ಬಳಿ ಚರಂಡಿಯ ಮೂಲಕ ಸಹಜವಾಗಿ ನೀರು ಹರಿದು ಹೋಗುವ ಮಾರ್ಗದಲ್ಲಿ ಮಣ್ಣು ತುಂಬಿರುವುದರಿಂದ ರಸ್ತೆ ಮೇಲೆಯೇ ನೀರು ನಿಲ್ಲುವುದಲ್ಲದೇ ಮಳೆ ಹೆಚ್ಚಾದಂತೆ ಮನೆಯೊಳಕ್ಕೆ ನೀರು ನುಗ್ಗುವ ಸ್ಥಿತಿ ಬಂದೊದಗಿದೆ. ಬೈಂದೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡ ಈ ಬಗ್ಗೆ ಮೌನವಹಿಸಿದ್ದಾರೆ.

Leave a Reply