ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ ವಠಾರದಲ್ಲಿ ನಿರ್ಮಾಣಗೊಳ್ಳಲಿರುವ ‘ಸಮುದಾಯ ಭವನ’ಕ್ಕೆ ಬೈಂದೂರು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪಊಜಾರಿ ಅವರು ಶಿಲನ್ಯಾಸಗೈದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ರಾಜು ಪೂಜಾರಿ, ಕ್ರೈಸ್ತ ಮುಖಂಡ ಮಾರ್ಟಿನ್ ಎವರೆಸ್ಟ್ ಡಯಾಸ್, ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್, ಗುತ್ತಿಗೆದಾರ ರವೀಂದ್ರ, ಫಾದರ್ ಮೈಕಲ್ ಡಯಾಸ್, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಇನಾಸ್ ಲೋಬೋ, ಕಾರ್ಯದರ್ಶಿ ಅನಿತಾ ನಜ್ರತ್ ಉಪಸ್ಥಿತರಿದ್ದರು. ಧರ್ಮಗುರು ರೆ.ಫಾ. ರೋನಾಲ್ಡ್ ಮಿರಾಂದ್ ಅವರು ಸ್ವಾಗತಿಸಿ, ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೋ ವಂದಿಸಿರು. ಹೆನ್ರಿ ಲೋಬೋ ಕಾರ್ಯಕ್ರಮ ನಿರೂಪಿಸಿದರು.