ಜನತೆಯನ್ನು ಅತಂತ್ರಕ್ಕೆ ತಳ್ಳಿದ ಒಳಚರಂಡಿ ಯೋಜನೆ. ಕುಂದಾಪುರ ಪುರಸಭೆ ಕಛೇರಿ ಎದುರು ಪ್ರತಿಭಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗ ಕಳಪೆ ಕಾಮಗಾರಿ ವಿರುದ್ಧ, ಸಂಸ್ಕರಣಾ ಕೇಂದ್ರವನ್ನ ಜನನಿಬಿಡ ಪ್ರದೇಶದಿಂದ ದೂರದ ಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ, ರಸ್ತೆಗಳ ದುರಸ್ತಿ ಹಾಗೂ ಪುರಸಭೆಗೆ ಖಾಯಂ ಇಂಜಿನಿಯರ್ ನೇಮಕಕ್ಕೆ ಆಗ್ರಹಿಸಿ ಕುಂದಾಪುರ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಮತ್ತು ಸಿಪಿಐ(ಎಂ) ಕುಂದಾಪುರ ವಲಯ ಸಮಿತಿಗಳ ಜಂಟಿ ಸಹಯೋಗದ ನೇತೃತ್ವದಲ್ಲಿ ಕುಂದಾಪುರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ಕುಂದಾಪುರ ಪುರಸಭೆ ಕಛೇರಿ ಎದುರು ಸಾಮೂಹಿಕ ಧರಣಿ ಸತ್ಯಾಗ್ರಹ ಹೋರಾಟ ಜರಗಿತು.

Call us

Click Here

ಕುಂದಾಪುರ ಜನತೆ ಬಹುಕಾಲದಿಂದ ಸುವ್ಯವಸ್ಥಿತವಾದ ಒಳಚರಂಡಿ ಯೋಜನೆ ಆಗಬೇಕೆಂದು ಬಯಸುತ್ತಿದ್ದು, ಅದರಂತೆ ರೂಪಾಯಿ ೪೮ ಕೋಟಿ ಯೋಜನೆ ಜ್ಯಾರಿ ಮಾಡುವುದಾಗಿ ಸರಕಾರ ಪ್ರಕಟಿಸಿದಾಗ ಕುಂದಾಪುರ ಪುರಸಭಾ ವ್ಯಾಪ್ತಿಯ ಸಮಸ್ತ ನಾಗರಿಕರು ಸ್ವಾಗತಿಸಿದರು. ಈ ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಕೃಷಿಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಲಾಗಿದ್ದರೂ ಈಗ ಬಿಡುಗಡೆ ಮಾಡಿರುವ ಪರಿಹಾರ ಹಣ ಅತೀ ಕಡಿಮೆಯಾಗಿರುವುದನ್ನು ಕೃಷಿಕರು ಒಪ್ಪದೇ ಪರಿಹಾರ ಹಣವನ್ನು ಪಡೆಯದೇ ನಿರಾಕರಿಸಲಾಗಿದೆ. ಈ ಯೋಜನೆಯಲ್ಲಿ ಬರುವ ಶೇಖರಣಾ ಘಟಕ ಮತ್ತು ಸಂಸ್ಕರಣಾ ಕೇಂದ್ರವನ್ನು ಜನ ನಿಬಡ ವಸತಿ ಪ್ರದೇಶದಿಂದ ದೂರದ ಸ್ಥಳಕ್ಕೆ ವಿಸ್ತರಿಸಬೇಕೆಂಬುದನ್ನು ಸ್ಥಳೀಯ ನಿವಾಸಿಗಳು ಒತ್ತಾಯಿಸಿದಾಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮುಂದುವರಿಸುವ ಭರವಸೆ ನೀಡಿ, ಇದೀಗ ಕೊಟ್ಟ ಮಾತಿಗೆ ತಪ್ಪಿ ಅದೇ ಸ್ಥಳದಲ್ಲಿ ಗಡಿ ಗುರುತು ಮಾಡಲು ಮುಂದಾಗುತ್ತಿರುವುದು ಖಂಡನೀಯ. ಇದರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯ ವಡೇರ ಹೋಬಳಿ, ಬೆಟ್ಟಗಾರ ಮತ್ತು ಮಠದಬೆಟ್ಟು ಪ್ರದೇಶ ಪರಿಸರದ ಜನರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳ ಈ ಜನವಿರೋಧಿ ನಿಲುವನ್ನು ತೀವ್ರವಾಗಿ ವಿರೋಧಿಸಲಾಗಿದೆ.

ಕಳಪೆ ಕಾಮಗಾರಿ: ಒಳಚರಂಡಿ ಯೋಜನೆಯಡಿ ನಡೆದಿದೆ ಎನ್ನಲಾದ ಕಾಮಗಾರಿ ತೀರ ಕಳೆಪೆ ಗುಣಮಟ್ಟದಲ್ಲಿದೆ ಅಲ್ಲದೇ ಒಂದು ರಸ್ತೆ ಕಾಮಗಾರಿ ಆರಂಭ ಮಾಡಲು ನಡುರಸ್ತೆಯ ಕಾಂಕ್ರೀಟ್ ಕಡಿದು ಹಾಕಿ ಜನವಾಹನ ಸಂಚಾರಕ್ಕೆ ತೊಂದರೆಯಾಗುವಂತೆಯೇ ಕಾಮಗಾರಿ ಸಂಪೂರ್ಣಗೊಳಿಸದೇ ಪುನಃ ಸ್ವಲ್ಪ ಸಮಯದ ಬಳಿಕ ಮತ್ತೆ ಅಗೆಯುವುದರಿಂದ ಸಾರ್ವಜನಕರಿಗೆ ಸಂಕಟ ಅನುಭವಿಸುವಂತಾಗಿದೆ. ಹಲವರು ಪ್ರದೇಶದಲ್ಲಿ ರಸ್ತೆಯ ಬದಿಯ ಚರಂಡಿ ಕುಸಿದಿದೆ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಪುರಸಭೆಯ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ’ಅವಘಟಗಳಿಗೆ ಎಡೆಮಾಡಿ ಕೊಡುತ್ತಿರುವುದು’ ಗಮನದಲ್ಲಿದೆಯೆಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆಯೇ ವಿನಹಃ ಕಾರ್ಯಪ್ರವರ್ತರಾಗುತ್ತಿಲ್ಲ.

ಖಾಯಂ ಇಂಜಿನಿಯರ್ ಬೇಕು: ಕುಂದಾಪುರ ಪುರಸಭೆ ಬೆಳೆಯುತ್ತಿರುವ ನಗರವಾಗಿದೆ. ಆದರೆ ಇಲ್ಲಿನ ಪುರಸಭೆಯಲ್ಲಿ ಈ ಮೊದಲು ೪ ಮಂದಿ ಖಾಯಂ ಇಂಜಿನಿಯರ್ ಕರ್ತವ್ಯದಲ್ಲಿದ್ದರು. ಇದೀಗ ಸುಮಾರು ಒಂದುವರೆ ವರ್ಷದಿಂದ ವಾರದಲ್ಲಿ ಕೇವಲ ದಿನ ಬೇರೆಡಯಿಂದ ಒಬ್ಬ ಎರವಲು ಇಂಜಿನಿಯರ್ ಬಂದು ಹೋಗುವುದರಿಂದ ಒಳಚರಂಡಿ ಯೋಜನೆ ಹಾಗೂ ಪುರಸಭೆ ವತಿಯಿಂದ ನಡೆಯುವ ಇತರ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ, ನಿರ್ವಹಣೆ ನೋಡಿಕೊಳ್ಳವವರಿಲ್ಲದೇ ಕಳಪೆ ಕಾಮಗಾರಿ ನಡೆಯುವ ಅವಕಾಶ ಹೆಚ್ಚಿದೆ. ಅಲ್ಲದೇ ನಾಗರಿಕರಿಗೂ ವಸತಿ, ಕಟ್ಟಡ ನಿರ್ಮಾಣ ಮತ್ತಿತ್ತರ ಕಾಮಗಾರಿ ಕೆಲಸಗಳಿಗೆ ಇಂಜಿನಿಯರ್ ಇಲ್ಲದೇ ತುಂಬಾ ಅನಾನುಕೂಲವಾಗಿರುತ್ತದೆ.

ಈ ಎಲ್ಲಾ ಜ್ವಲಂತ ಸಮಸ್ಯೆಗಳನ್ನು ಸರಿಪಡಿಸಬೇಕಾದ ಪುರಸಭಾ ಆಡಳಿತ ಮಂಡಳಿ ಈ ಬಗ್ಗೆ ಮುತುವರ್ಜಿ ವಹಿಸದೇ, ಯೋಜನೆ ಕುರಿತು ವಿವರವಾದ ಮಾಹಿತಿ ಪಡೆಯದೇ ಇರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪರಿಪೂರ್ಣವಾದ ವ್ಯವಸ್ಥಿತ ಒಳಚರಂಡಿ ಯೋಜನೆ ಕಾಮಗಾರಿ ಜ್ಯಾರಿ ಮಾಡುವುದು ಬೆಳೆಯುತ್ತಿರುವ ಕುಂದಾಪುರ ನಗರಕ್ಕೂ ತೀರಾ ಅಗತ್ಯವಾಗಿದೆ. ಸ್ಥಳೀಯ ನಾಗರಿಕರಿಗೆ ಆತಂಕವಾಗಿರುವ ಶೇಖರಣೆ ಬಾವಿ ಮತ್ತು ಶುದ್ಧಿಕರಣ ಘಟಕವನ್ನು ಜನವಸತಿ ಪ್ರದೇಶದಿಂದ ದೂರದ ಸ್ಥಳಕ್ಕೆ ವಿಸ್ತರಿಸಬೇಕು ಎಂದು ಆಗ್ರಹಿಸಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಮತ್ತು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಕುಂದಾಪುರ ವಲಯ ಸಮಿತಿ ವತಿಯಿಂದ ಪುರಸಭಾ ಅಧ್ಯಕ್ಷರಾದ ವಸತಿ ಮೋಹನ್ ಸಾರಂಗ ಮತ್ತು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಮುಷ್ಕರದ ಪುರಸಭಾ ಮಾಜಿ ಅಧ್ಯಕ್ಷರಾದ ವಿ.ನರಸಿಂಹ, ಗುಣರತ್ನ, ಎಚ್. ನರಸಿಂಹ, ಕೆ. ಶಂಕರ, ಮಹಾಬಲ ವಡೇರ ಹೋಬಳಿ, ರಾಜೀಶ್ ವಡೇರ ಹೋಬಳಿ, ಶಿವಮೆಂಡನ್, ವೆಂಕಟೇಶ ಕೋಣಿ, ಕೃಷ್ಣ ಪೂಜಾರಿ, ಲಕ್ಷಣ ಡಿ. ಬಲ್ಕೀಸ್, ಪುಂಡಲೀಕ ಮೊದಲಾದವರು ನೇತೃತ್ವ ವಹಿಸಿದ್ದರು.

Click here

Click here

Click here

Click Here

Call us

Call us

 

Leave a Reply