ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ನಿತ್ಯನಿಧಿ(ಪಿಗ್ಮಿ) ಸಂಗ್ರಹಕಾರರ ಸಂಘದ ಪದಾಧಿಕಾರಿಗಳ ಆಯ್ಕೆ ಭಾನುವಾರ ಕುಂದಾಪುರದ ಸೈಂಟ್ ಮೇರಿಸ್ ಶಾಲೆಯಲ್ಲಿ ಜರುಗಿತು ನೂತನ ಅಧ್ಯಕ್ಷರಾಗಿ ಜಿ.ಆರ್. ಗೋಪಾಲ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಅಂತೋನಿ ಡಿ. ಅಲ್ಮೇಡಾ, ಉಪಾಧ್ಯಕ್ಷರಾಗಿ ಜಿ.ಕುಮಾರಸ್ವಾಮಿ, ಆನಂದ ಮಡಿವಾಳ, ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಹಂಗಳೂರು, ಜೊತೆ ಕಾರ್ಯದರ್ಶಿ ಚಂದ್ರ ಕೆ. ಕೋಶಾಧಿಕಾರಿ ಸುಬ್ರಹ್ಮಣ್ಯ ಕಾರಂತ, ಜೊತೆ ಕೋಶಾಧಿಕಾರಿ ದತ್ತಾನಂದ, ಸಂಘಟನಾ ಕಾರ್ಯದಶಿ ಗಣೇಶ ಸೇರೆಗಾರ್, ಗೌರವ ಸಲಹೆಗಾರರಾಗಿ ನಜೀರ್ ಅಹ್ಮದ್, ಶಂಕರ ಬಿಲ್ಲವ, ಗೋಪಾಲ ಜಿ.ವಿಷ್ಣು ಆಯ್ಕೆಯಾಗಿರುತ್ತಾರೆ.