ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 100ಕಿಲೋವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ, ಅಧೀಕ್ಷಕಿ ಶೋಭಾ, ಮಂಗಳೂರು ವಿದ್ಯುಚ್ಛಕ್ತಿ ನಿಗಮ ಕುಂದಾಪುರದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅಶೋಕ್ ಪೂಜಾರಿ, ಟಾಟಾ ಸೋಲಾರ್ ಚಾನೆಲ್ ಪಾಲುದಾರರಾದ ವಿಜಯಚಂದ್ರ ರಾವ್, ಉಮೇಶ್ ರಾವ್, ಸೂರ್ಯನಾರಾಯಣ ರಾವ್ ಹಾಗೂ ಸಚಿನ್ ಶಿರೂರು ಉಪಸ್ಥಿತರಿದ್ದರು.
ಸೌರಶಕ್ತಿ ಉತ್ಪಾದನಾ ಘಟಕದವು ದಿನವೊಂದಕ್ಕೆ ಸರಾಸರಿ 400ರಿಂದ 450ಯುನಿಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಕಾಲೇಜಿನಗೆ ಅಗತ್ಯವಿರುವ ವಿದ್ಯುತ್ತನ್ನು ಪೂರ್ಣಪ್ರಮಾಣದಲ್ಲಿ ಪೂರೈಸುತ್ತದೆ. ಇದರಿಂದಾಗಿ ಕಾಲೇಜು ವಿದ್ಯುತ್ ಸ್ವಾವಲಂಬಿಯಾಗಲಿದೆ.