ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಕಡಲ ಕಿನಾರೆಯಲ್ಲಿ ಕಡಲಾಮೆಯೊಂದು ಪತ್ತೆಯಾಗಿದ್ದು, ಸ್ಥಳೀಯರು ಕಡಲಾಮೆಯನ್ನು ಸಂರಕ್ಷಿಸಿ ಕಡಲಿಗೆ ಬಿಟ್ಟಿದ್ದಾರೆ.
ಬುಧವಾರ ಸಂಜೆ ಗಂಗೊಳ್ಳಿಯ ಬ್ಯಾಲಿಕೊಡೇರಿ ಸಮೀಪದ ಕಡಲ ತೀರದಲ್ಲಿ ಮೂರು ಕಾಲಿನ ಅಪರೂಪದ ಕಡಲಾಮೆಯೊಂದು ಕಂಡು ಬಂದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಕಡಲ ತೀರದ ಕಲ್ಲಿಗೆ ಬಡಿಯುತ್ತಿತ್ತು. ಇದನ್ನು ಗಮನಿಸಿದ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪೂಜಾರಿ ಅವರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದ ಕಡಲಾಮೆಯನ್ನು ಸ್ಥಳೀಯರ ಯುವಕರ ಸಹಾಯದಿಂದ ಈ ಸಂರಕ್ಷಿಸಿ ಸ್ವಲ್ಪ ಸಮಯದ ಬಳಿಕ ಇದನ್ನು ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.