ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹೆರಿಯಣ್ಣ ಆಚಾರ್ಯ ಅವರನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂ ವತಿಯಿಂದ ಇತ್ತಿಚಿಗೆ ಬೀಳ್ಕೊಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಗೋಪಾಲ ಗಾಣಿಗ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ಸಿಆರ್‌ಪಿ ಶ್ರೀಕಾಂತ್ ಕಾಮತ್, ದಾನಿ ಕೃಷ್ಣ ಪೂಜಾರಿ, ಎಸ್‌ಡಿಎಂಸಿ ಮಾಜಿ ಸದಸ್ಯರುಗಳಾದ ರಘುರಾಮ ಪೂಜಾರಿ, ಮಂಜುನಾಥ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಕವಿತಾ ಜಿ. ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಗೀತಾ ಸ್ವಾಗತಿಸಿ, ಸುಮನ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಹೆರಿಯಣ್ಣ ಆಚಾರ್ಯ ಅವರು ಅಂಪಾರು ಗುಂಡಿಬೆಟ್ಟು, ವಾಲ್ತೂರು, ಗುಜ್ಜಾಡಿ, ಮರವಂತೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಬಳಿಕ ಹೆರಂಜಾಲು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.