ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ: ದೇಶದ ಅಭಿವೃದ್ಧಿಯ ಬಗೆಗಿನ ಚಿಂತನೆ, ಸಾಮಾಜಿಕ ಜೀವನ, ಸಾಮಾಜಿಕ ಬದ್ಧತೆ ರೋಟರಿ ಕಲಿಸುತ್ತದೆ. ರೋಟರಿಯಲ್ಲಿ ಎಲ್ಲ ವರ್ಗದ ಹಾಗೂ ವಿವಿಧ ಕೆಲಸ ಮಾಡುವ ಜನರು ಇರುತ್ತಾರೆ. ಅವರೆಲ್ಲ ಸಮಾಜ ಸೇವಾ ಕಾರ್ಯ ಮಾಡುತ್ತಾರೆ. ಈ ರೀತಿಯ ಚಿಂತನೆಗಳ ಬಗ್ಗೆ ಯಾವ ಪದವಿ ಹಾಗೂ ಶಿಕ್ಷಣ ಕಲಿಸದ ಶಿಕ್ಷಣ ರೋಟರಿ ಕಲಿಸುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಹೇಳಿದರು.
ಅವರು ಅಂಪಾರಿನ ಶ್ರೀ ಮಹಿಷಮರ್ದಿನಿ ಸಭಾ ಭವನದಲ್ಲಿ ನಡೆದ ಅಂಪಾರು ರೋಟರಿ ಕ್ಲಬ್‌ನ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಕುಂದಾಪುರದಲ್ಲಿ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕವಾಗಿ ನಿರ್ಮಾಣದಿಂದ ಅನೇಕರು ಪ್ರಾಣ ಕಳೆದು ಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬದಿ ಯಲ್ಲಿರುವ ಅನೇಕ ಸರಕಾರಿ ಶಾಲೆಗಳು ಅನಿ ವಾರ್ಯವಾಗಿ ಮುಚ್ಚುವ ಹಂತಕ್ಕೆ ಬಂದಿವೆ. ಈ ಬಗ್ಗೆ ರೋಟರಿಯಂಥ ಸಂಸ್ಥೆಗಳು ಗಂಭೀರ ವಾಗಿ ಚರ್ಚೆಗಳನ್ನು ನಡೆಸಬೇಕು ಎಂದರು.
ಅಂಪಾರು ರೋಟರಿ ಕ್ಲಬ್‌ನ ಅಧ್ಯಕ್ಷ ಎ. ತೇಜಪ್ಪ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಲಬ್‌ನ ಸರ್ವ ಸದಸ್ಯರ ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ರೋಟರಿಯ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿದು, ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.ರೋಟರಿ ವಲಯ-2ರ ಸಹಾಯಕ ರಾಜ್ಯಪಾಲ ಜಿ. ರತ್ನಾಕರ ಗುಂಡ್ಮಿ ಪದಪ್ರದಾನ ನೆರವೇರಿಸಿ, ಶುಭಹಾರೈಸಿದರು. ವಲಯ ಸೇನಾನಿ ಎ.ಎನ್. ಆನಂದ ಶೆಟ್ಟಿ ರೋಟರಿಯ ಪತ್ರಿಕೆ ದರ್ಪಣ ಬಿಡುಗಡೆ ಮಾಡಿ, ಶುಭಾಶಂಸನೆಗೈದರು. ನಿಕಟಪೂರ್ವ ಅಧ್ಯಕ್ಷ ಎನ್. ಭೋಜರಾಜ ಉಪಸ್ಥಿತರಿದ್ದರು. ಈ ಸಂದರ್ಭ ಕ್ಲಬ್ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೆ. ಗಣಪಯ್ಯ ಶೆಟ್ಟಿ ಕುಪ್ಪಗೋಡು ಸ್ವಾಗತಿಸಿ ದರು. ನಿಕಟಪೂರ್ವ ಕಾರ್ಯದರ್ಶಿ ಸದಾಶಿವ ವೈದ್ಯ ವರದಿ ವಾಚಿಸಿದರು. ಸತೀಶ್‌ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಎಂ. ಜಗನ್ನಾಥ ಶೆಟ್ಟಿ ವಂದಿಸಿದರು.