ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಸ್ಯಗಳು ಪ್ರಕೃತಿಯ ದೊಡ್ಡ ಕೊಡುಗೆ. ಸಸ್ಯ ಸಂವರ್ಧನೆಯಿಂದ ಮನುಷ್ಯನ ಬದುಕು ಹಸನಾಗುತ್ತದೆ. ಕರಾವಳಿಯು ಸಕಲ ರೀತಿಯ ಶ್ರೇಷ್ಠ ಸಸ್ಯ ಸಂಪತ್ತನ್ನು ಒಳಗೊಂಡಿದ್ದು ಅವುಗಳ ಶಾಸ್ತ್ರೀಯ ಅಧ್ಯಯನ ಇಂದಿಗೂ ಅವಶ್ಯಕತೆಯಾಗಿದೆ ಎಂದು, ಕುಂದಪ್ರಭ ಪತ್ರಿಕೆಯ ಸಂಪಾದಕರು ಶ್ರೀ ಯು.ಎಸ್ ಶೆಣೈ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ.ರಾಮಚಂದ್ರ, ಗೋ ಗ್ರೀನ್ ಕ್ಲಬ್ ಇಅದರ್ ಸಂಯೋಜಕರಾದ ಪ್ರೊ. ಮಂಜುನಾಥ ಉಪಸ್ಥಿತರಿದ್ದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಗಾಯತ್ರಿ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಚೇತನಾ ಸ್ವಾಗತಿಸಿದರು. ದಶಮಿ ವಂದಿಸಿದರು. ಸೌಮ್ಯ ಕಾಯಕ್ರಮ ನಿರ್ವಹಿಸಿದರು. ನಂತರ ಕಾಲೇಜಿನ ಸಸ್ಯೋದ್ಯಾನದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ಬೀಜದುಂಡೆಗಳನ್ನು ವಿತರಿಸಲಾಯಿತು.