ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆ, ಯಸ್ಕೋರ್ಡ್ ಟ್ರಸ್ಟ್ ಹಾಗೂ ಸೌಜನ್ಯ ಕಲಾ ಸಂಘದ ಆಶ್ರಯದಲ್ಲಿ ಬೈಂದೂರು ಆಶ್ರಮ ಶಾಲೆಯಲ್ಲಿ ಹತ್ತು ದಿನಗಳ ಚಿಣ್ಣರ ಚೈತ್ರೋತ್ಸವ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಿತು.
ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕರು ಹಿರಿಯ ಕಲಾವಿದರಾದ ಪಿ. ಶೇಷಪ್ಪಯ್ಯ ಹೆಬ್ಬಾರ್ ಮಾತನಾಡಿ ಬೇಸಿಗೆ ಶಿಬಿರಗಳು ಮಕ್ಕಳು ಸರ್ವಾಂಗಿಣ ವಿಕಸನಕ್ಕೆ ಪೂರಕವಾಗಿರಬೇಕು ಹಾಗೂ ಕುತೂಹಲ ಕೆರಳಿಸಿ ಕೌಶಲ್ಯಯುತ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಶುಭಹಾರೈಸಿದರು
ಮುಖ್ಯ ಅತಿಥಿಗಳಾಗಿ ರಂಗ ಅಧ್ಯಯನ ಕೇಂದ್ರ ಕುಂದಾಪುರದ ನಾಟಕ ನಿರ್ದೇಶಕರು ಹಾಗೂ ಉಪನ್ಯಾಸಕರಾದ ವಿನಾಯಕ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ರಾಯಚೂರು, ಪ್ರಕಾಶ ಕೊಪ್ಪಳ, ಬೈಂದೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಸರ್ವೋತ್ತಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ಸ್ವಾಗತಿಸಿದರು. ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರದ ಕಾರ್ಯಯೋಜನೆಗಳನ್ನು ತಿಳಿಸಿದರು. ಸ.ಹಿ.ಪ್ರಾ. ಶಾಲೆ ಯಳಜಿತ್ ಇಲ್ಲಿಯ ಸಹಶಿಕ್ಷಕಿ ಜ್ಯೋತಿ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಶ್ಚಿತಾ ವಂದಿಸಿದರು.