ಬಂಡವಾಳ ಹೂಡಿಕೆಯ ಕುರಿತು ಮಾಹಿತಿ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿದೆಸೆಯಲ್ಲೇ ಹಣ ಉಳಿತಾಯ ಮಾಡುವ ಮನೋ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಹಾಗೂ ಉಳಿತಾಯದ ಹಣವನ್ನು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು. ಬಂಡವಾಳ ಹೂಡಿಕೆಯ ಸಮಯದಲ್ಲಿ ಮಾರುಕಟ್ಟೆಯ ಏರುಪೇರುಗಳ ಸೂಕ್ಷ್ಮತೆಯನ್ನು ಗ್ರಹಿಸಬೇಕು. ಇದರಿಂದ ವ್ಯಕ್ತಿಯ ಹಣಕಾಸಿನ ಅಭಿವೃದ್ಧಿ, ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಉಪನ್ಯಾಸಕ ರಾಮಚಂದ್ರ ಭಟ್ ಹೇಳಿದರು.

Call us

Click Here

ಅವರುಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಬಾಂಬೆ ಸ್ಟಾಕ್‌ಎಕ್ಸ್‌ಚೆಂಜ್ ವತಿಯಿಂದನಡೆದಕಾರ್ಯಕ್ರಮದಲ್ಲಿ ಶೇರು ಮಾರುಕಟ್ಟೆಯ ವಿದ್ಯಾಮಾನಗಳ ಕುರಿತು ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದರಾಜೇಶ್ ಶೆಟ್ಟಿ, ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಯೋಜಕಿತಿಲಕಲಕ್ಷ್ಮಿ ಮತ್ತು ಸಹ ಸಂಯೋಜಕಿ ನಿಶಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬ್ರೀಟಾಕಾರ್ಯಕ್ರಮ ನಿರೂಪಿಸಿದರು.

Leave a Reply