ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಪಬ್ಲಿಕ್ ಆವರಣದಲ್ಲಿ ಕುಂದಾಪುರ ತಾಲೂಕಿನ ಉಪ ಅರಣ್ಯ ವಿಭಾಗ ಅಧಿಕಾರಿಗಳಾದ ಎಮ್.ವಿ.ಅಮರನಾಥರವರ ಉಪಸ್ಥಿತಿಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಈ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ೪೦೦ ಕ್ಕೂ ಹೆಚ್ಚು ಮೆಡಿಸಿನ್ ಯುಕ್ತ ಸಸ್ಯಗಳು ಇರುವುದನ್ನು ತಿಳಿದು ಅರಣ್ಯಾದಿಕಾರಿಗಳು ಸಂತಸ ವ್ಯಕ್ತ ಪಡಿಸಿದರು.
ಹಸಿರಿನ ಹಬ್ಬಕ್ಕೆ ಚಾಲನೆ ನೀಡಿದ ಎಮ್.ವಿ.ಅಮರನಾಥರವರು ಪರಿಸರದಲ್ಲಿ ಅಸಮತೋಲನ ಉಂಟಾದರೆ ಪ್ರಾಕೃತಿಕ ವಿಕೋಪಗಳಿಗೆ ಹಾಗು ರೋಗರುಜಿನಗಳಿಗೆ ಕಾರಣವಾಗಲಿದೆ.
ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಸಂರಕ್ಷಣೆಗೆ ಹಾಗು ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು. ’ಹಸಿರು ಮಕ್ಕಳ ಉಸಿರು ’ ಎಂಬಂತೆ ಪರಿಸರ ಜಾಗೃತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹ ಸಂತೋಷ ತಂದಿದೆ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಉತ್ತಮ ಸಂದೇಶ ನೀಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಮುಂದಾಳತ್ವ ವಹಿಸಿ ತಮ್ಮ ಮನೆ ಶಾಲೆ ಓಣಿಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ಕೆಲಸಕ್ಕೆ ಮುಂದಾಗುವಂತೆ ಮಾರ್ಗದರ್ಶನ ನೀಡಿದರು.
’ಮಗುವಿಗೊಂದು ಮರ-ಶಾಲೆಗೊಂದು ವನ ’ ಎಂಬ ಮಾತು ಶಾಲೆಯನ್ನು ನೋಡಿದಾಗ ನಿಜವೆನಿಸಿದೆ ಎನ್ನತ್ತಾ ನಮ್ಮ ಊರಿನ ಸುತ್ತಲಿನ ಪ್ರದೇಶ ಪ್ಲಾಸ್ಟಿಕ್ ಮುಕ್ತವಲಯವಾಗಿಸಲು ಸಲಹೆ ನೀಡಿ ತಮ್ಮ ಮನೆ ಶಾಲೆಯಲ್ಲಿ ಸಸಿಗಳನ್ನು ನೆಡೆಲು ವಿದ್ಯಾರ್ಥಿಗಳಿಗೆ ಒಂದೊಂದು ಗಿಡಗಳನ್ನು ಒಬ್ಬೊಬ್ಬ ವಿದ್ಯಾರ್ಥಿಗೆ ದತ್ತು ನೀಡಿದ್ದು ವಿಶೇಷ. ಅಲ್ಲದೇ ಶಾಲಾಮಕ್ಕಳು ಪರಿಸರ ಸಂರಕ್ಷಣೆ ಕುರಿತಾದ ಕಿರು ನಾಟಕ ಪ್ರದರ್ಶಿಸಿದ್ದು, ದಿನದ ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ-ಕಾರ್ಯನಿರ್ವಾಹಕರಾದ ಶ್ರೀ.ಸುಭಾಶ್ಚಂದ್ರ ಶೆಟ್ಟಿ ಮತ್ತು ಶ್ರೀಮತಿ. ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಸನ್ನಿ ಪಿ.ಜಾನ್ ರವರು ಮತ್ತು ಗುರುಕುಲ ಪಬ್ಲಿಕ್ ಶಾಲಾ ಪ್ರಾಂಶುಪಾಲರಾದ ಶ್ರೀ. ಶಾಯಿಜು ಕೆ.ಆರ್.ನಾಯರ್ ರವರು ಉಪಸ್ಥಿತರಿದ್ದರು.















