ನಮ್ಮ ಕೆಲಸವನ್ನು ನಾವು ಗೌರವಿಸಿದರೆ ಸಮಾಜವೂ ಗೌರವಿಸುವುದು: ಶಿರೂರು ಶ್ರೀ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೀವನೋಪಾಯಕ್ಕಾಗಿ ಮಾಡುವ ನಮ್ಮ ಉದ್ಯೋಗವನ್ನು ಮೊದಲು ನಾವು ಗೌರವಿಸಬೇಕು. ಆಗ ನಮ್ಮನ್ನು ಸಮಾಜ ಗೌರವಿಸುತ್ತದೆ ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ಉಡುಪಿ ಶಿರೂರು ಮಠಾಧಿಪತಿ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿದರು.

Call us

Click Here

ನಾಗೂರು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಆರನೇ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾ ಸಂಘಟನೆಯ ಸರ್ವ ಸದಸ್ಯರ ಮಾಹಿತಿ ಕೈಪಿಡಿ ಅನಾವರಣ ಹಾಗೂ ’ವಿದ್ಯಾನಿಧಿ’ ಯೋಜನೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಧ್ವನಿ ಬೆಳಕು ಈಗ ಅನಿವಾರ್ಯ ವ್ಯವಸ್ಥೆ. ಅದರ ಸಂಯೋಜಕರು ಹಗಲು ರಾತ್ರಿಯೆನ್ನದೆ ದುಡಿಯುವ ಶ್ರಮಜೀವಿಗಳು. ವೃತ್ತಿಯೊಂದಿಗೆ ಅವರು ನಡೆಸುತ್ತಿರುವ ಸಮಾಜ ಸೇವೆಯ ಕಾರಣದಿಂದ ಸಮಾಜ ಸದಾ ಅವರನ್ನು ಗುರುತಿಸುತ್ತದೆ ಹಾಗೂ ಸ್ಮರಿಸುತ್ತದೆ ಎಂದರು.

ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಉದಯ್ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಆಂಟನಿ ಡೇಸಾ ಶಂಕರಪುರ ಇವರು ಮಹಾಸಭೆ ಉದ್ಘಾಟಿಸಿದರು. ಸಭೆಯ ನಡಾವಳಿಯಂತೆ ಜಿಲ್ಲಾ ಕಾರ್ಯದರ್ಶಿ ಕೆ. ದಾಮೋದರ್ ವಾರ್ಷಿಕ ವರದಿ, ಜಿಲ್ಲಾ ಕೋಶಾಧಿಕಾರಿ ಸಂತೋಷ್ ಶೆಟ್ಟಿಗಾರ್ ಆಯ-ವ್ಯಯ, ಲೆಕ್ಕಪತ್ರವನ್ನು ಮತ್ತು ಪ್ರಸ್ತುತ ಸಾಲಿನ ಬಜೆಟ್ ಮಂಡಿಸಿ ಅನುಮೋದನೆ ಪಡೆದರು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಕಾರ್ಮಿಕರಿಗೆ ಮತ್ತು ವಲಯಗಳ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು. ಸಂಘಕ್ಕೆ ನಿವೇಶನ ಪಡೆದು ಕಟ್ಟಡ ನಿರ್ಮಿಸುವ, ಸಂಘದ ಆಶ್ರಯದಲ್ಲಿ ಸಹಕಾರಿ ಸಂಘ ಸ್ಥಾಪಿಸುವ ಕುರಿತು ವಿಚಾರ ವಿನಿಮಯ ನಡೆಯಿತು. ಘಾಟ್ಗೇ ಕರ್ಕೇರಾ ಪವರ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಶೇಖರ ಕರ್ಕೇರಾ ಇವರಿಂದ ವಿದ್ಯುತ್ ಉಪಕರಣ ಹಾಗೂ ಜನರೇಟರ್‌ಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಮನೆಗಳಲ್ಲಿ ರಾತ್ರಿ ನಡೆಯುವ ಕಾರ್ಯಕ್ರಮಗಳಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸುವಾಗ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ದೂರು ಇರುವುದರಿಂದ ಅದನ್ನು ರಾತ್ರಿ ೧೧ರ ವರೆಗೆ ಮಾತ್ರ ಬಳಸುವ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗಳನ್ನು ವಿನಂತಿಸಲು ನಿರ್ಧರಿಸಲಾಯಿತು.

ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಕುಂದಾಪುರ ವಲಯಾಧ್ಯಕ್ಷ ರೋನಿ ಬೆರೆಟ್ಟೊ, ಬ್ರಹ್ಮಾವರದ ಪುಂಡಲೀಕ್ ಕಾಮತ್, ಉಡುಪಿಯ ಅನಿಲ್ ಕುಮಾರ್, ಕಾಪುವಿನ ರಾಘು ಡಿ. ಕೋಟ್ಯಾನ್, ಕಾರ್ಕಳದ ವಲಯಾಧ್ಯಕ್ಷ ಜಗದೀಶ್ ಆಚಾರ್ ಮತ್ತಿತರು ಉಪಸ್ಥಿತರಿದ್ದರು. ಬೈಂದೂರು ವಲಯಾಧ್ಯಕ್ಷ ಎನ್. ಶಶಿಧರ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಾಂತಾರಾಮ ಮಣಿಪಾಲ್ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply