ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವಾಡಿಗ ಮಿತ್ರ ( ಕದಂ ) ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು ಯೋಗೀಶ್ ಬಂಕೇಶ್ವರ ಕಿರುತೆರೆ ಕಲಾವಿದರು ಹಾಗೂ ಶ್ರೀಮತಿ ಅಂಬಿಕಾ ರಾಜು ದೇವಾಡಿಗ ತ್ರಾಸಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ ಮುಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ರಾಧಿಕಾ ಎಮ್ ಪೈ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ ಇವರ ಪ್ರತಿಭೆಯನ್ನು ಗೌರವಿಸಿ ಪುರಸ್ಕರಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ
ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಾದ ಶ್ವೇತಾ ಎಸ್ ದೇವಾಡಿಗ ಮರವಂತೆ,ಅಭಿಷೇಕ್ ಕೆ ದೇವಾಡಿಗ ನಾಗೂರೂ,ಪ್ರಜ್ವಲ್ ದೇವಾಡಿಗ ಉಪ್ಪಿನಕುದ್ರು,ರಕ್ಷಿತಾ ದೇವಾಡಿಗ ಉಪ್ಪುಂದ,ನಿವೇದಿತಾ ಎಸ್ ದೇವಾಡಿಗ ಆಲೂರು,ಇವರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.ಅತೀ ಹೆಚ್ಚು ಅಂಕ ಗಳಿಸಿದ 161 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ಅನಾರೋಗ್ಯ ಪೀಡಿತರಿಗೆ 20000 ಮಿಕ್ಕಿ ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೌರಿ ದೇವಾಡಿಗ ಜಿಲ್ಲಾ ಪಂಚಾಯತ್ ಸದಸ್ಯರು, ಶೀನ ದೇವಾಡಿಗ ಮರವಂತೆ ,ರಮೇಶ್ ದೇವಾಡಿಗ ವಂದ್ಸೇ,ಸುಧಾಕರ ದೇವಾಡಿಗ ಕದಂ ದುಬೈ,ಲಕ್ಷ್ಮಣ್ ದೇವಾಡಿಗ ಕದO ದುಬೈ ಬಚ್ಚ ದೇವಾಡಿಗ ಆಲೂರು, ರಘುರಾಮ ದೇವಾಡಿಗ ಆಲೂರು,ಜನಾರ್ದನ ದೇವಾಡಿಗ ಬೈಂದೂರು,ಶಾರದಾ ದೇವಾಡಿಗ ನಾಗೂರೂ,ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು,ಶ್ರೀ ರಾಮ ದೇವಾಡಿಗ ಉಪಪ್ರಾಂಶುಪಾಲರು,ತಮ್ಮಯ್ಯ ದೇವಾಡಿಗ,ವಿವಿಧ ದೇವಾಡಿಗ ಸಂಘಗಳ ಅಧ್ಯಕ್ಷರಾದ ಮಂಜು ದೇವಾಡಿಗ ಉಪ್ಪುಂದ,ನಾಗರಾಜ ರಾಯಪ್ಪನಮಠ ಕುಂದಾಪುರ,ರಮೇಶ್ ದೇವಾಡಿಗ ಕೋಟೇಶ್ವರ, ಮೊದಲಾದವರು ಉಪಸ್ಥಿತರಿದ್ದರು.ರಾಜೇಶ್ ದೇವಾಡಿಗ ಸ್ವಾಗತಿಸಿದರು.ರವಿ ದೇವಾಡಿಗ ತಲ್ಲೂರು ಮತ್ತು ಮಹೇಶ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿದರು ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು