ಭಂಡಾರ್ಕಾರ್ಸ್ ಕಾಲೇಜು: 1986ರ ಬಿಕಾಂ ವಿದ್ಯಾರ್ಥಿಗಳ ಪುನರ್ಮಿಲನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವನದಲ್ಲಿ 20ರತನಕ ಕಲಿಕೆ, 40ರತನಕ ಗಳಿಕೆ, 60ರತನಕ ಬಳಕೆ ನಂತರ ಉಳಿಕೆ ಈ ಸಿದ್ಧಾಂತದಿಂದ ಬದುಕಿ ನಮ್ಮ ನಮ್ಮ ಜೀವನಕ್ಕೊಂದು ಶಿಸ್ತನ್ನು ತುಂಬಿಸಿ ಕೊಳ್ಳ ಬೇಕು. ಹಣದ ಸಂಪಾದನೆಯೊಂದೇ ಸಾರ್ಥಕತೆಯಲ್ಲ. ಜೀವನದಲ್ಲಿ ಆರ್ಥಿಕ ಅಸ್ಸೆಟ್ ಜತೆ ಸ್ನೇಹ ಪ್ರೀತಿ ಭಾಂದವ್ಯದ ಅಸ್ಸೆಟ್ ಇರದಿದ್ದರೆ ಎಂದಿಗೂ ಬದುಕಿನ ಬ್ಯಾಲೆನ್ಸ್ ಶೀಟ್ ತಾಳೆಯಾಗೋದಿಲ್ಲ. ನಮ್ಮ ಜೀವನದ ಮೌಲ್ಯ ಹೆಚ್ಚುವಂತಹ ಭಾವನಾತ್ಮಕ ಸಂಪತ್ತೂ ಸಹ ಅತೀ ಅಗತ್ಯ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ನಿರ್ವತ್ತ ಉಪನ್ಯಾಸಕ ಮೋಹನ್ ದಾಸ್ ಪೈಯವರು ಹೇಳಿದರು.

Call us

Click Here

ಇಲ್ಲಿನ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರದಲ್ಲಿ ಜರಗಿದ ಭಂಡಾರ್ಕಾರ್ಸ್ ಕಾಲೇಜಿನ 1986ರ ಬಿಕಾಂ ವಿದ್ಯಾರ್ಥಿಗಳ ಪ್ರಪ್ರಥಮ ಪುನರ್ಮಿಲನದ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಆತ್ಮೀಯ ಮೇಳೈಸುವಿಕೆಯಿಂದ ಗುರು ಶಿಷ್ಯರ ಸಂಬಂಧಕ್ಕೆ ಅರ್ಥ ಹಾಗೂ ಸಾರ್ಥಕ್ಯ ಸಿಗುತ್ತದೆ ೩೧ ವರ್ಷದ ಬಳಿಕ ನಮಗೂ ಹಿಂದಿನ ದಿನವನ್ನು ಮೆಲುಕುವಂತೆ ಮಾಡಿ ಅಭಿಮಾನ ಮೂಡಿಸಿದ್ದೀರಿ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಪಿ ರಾಘವೇಂದ್ರ ಭಟ್ ರವರು ಮಾತನಾಡುತ್ತಾ ಬದುಕಿನಲ್ಲಿ ಸಮಸ್ಯೆ ಎಲ್ಲರಿಗೂ ಸಾಮಾನ್ಯ. ಆದರೆ ಈ ಎಲ್ಲದರ ನಡುವೆ ನಗುಮೊಗದಿಂದ ತಮ್ಮ ವೃತ್ತಿಯನ್ನು ವ್ಯಾಪಾರವನ್ನು ನಿಭಾಯಿಸಿ ಸಮಾಜದಲ್ಲಿ ಗೆಲುವು ಕಾಣುವುದು ವಾಣಿಜ್ಯ ವಿದ್ಯಾರ್ಥಿಗಳ ವಿಶೇಷ ಕೌಶಲ್ಯ ಅದು. ಯಶಸ್ಸು ಕಾಣಲು ಪದವಿಯಲ್ಲ ವಿನಯತೆ ಸೌಜನ್ಯ ಅಗತ್ಯ ಅದನ್ನು ರೂಢಿಸಿಕೊಂಡ ನೀವು ಸಹಜವಾಗಿ ಗೆಲ್ಲುತ್ತೀರಿ ಎಂದರು.

ನಿವೃತ್ತ ಕನ್ನಡ ಉಪನ್ಯಾಸಕ ಉಡುಪಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ಉಪೇಂದ್ರ ಸೋಮಯಾಜಿ, ನಿವೃತ್ತ ಹಿಂದಿ ಉಪನ್ಯಾಸಕ ಲೇಖಕ ಚಿಂತಕ ಭಾಸ್ಕರ್ ಮಯ್ಯ, ನಿವೃತ್ತ ವಾಣಿಜ್ಯ ಉಪನ್ಯಾಸಕ ನಾವುಂದ ರಿಚರ‍್ಡ್ ಅಲ್ಮೇಡಾ ಪದವಿ ಕಾಲೇಜಿನ ಪ್ರಾಂಶುಪಾಲ ಶಾಂತಾರಾಮ್, ನಿವೃತ್ತ ವಾಣಿಜ್ಯ ಉಪನ್ಯಾಸಕ ಹಾಲಿ ಎಂ ಕಾಂ ವಿಷಯದ ಉಪನ್ಯಾಸಕ ನಾರಾಯಣ ಸ್ವಾಮಿ, ನಿವೃತ್ತ ವಾಣಿಜ್ಯ ಉಪನ್ಯಾಸಕ ಹಾಲಿ ಉಜಿರೆ ಎಸ್ ಡಿ ಎಮ್ ಕಾಲೇಜಿನ ಶಿಕ್ಷಣ ಅಧಿಕಾರಿ ಕೆ ಆರ್ ಶಂಕರ್ ಹಾಗೂ ವಾಣಿಜ್ಯ ಉಪನ್ಯಾಸಕ ಅರುಣಾಚಲ ಮಯ್ಯ ಈ ಎಲ್ಲ ಗುರುಗಳು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ತಮ್ಮ ತಮ್ಮ ಅನುಭವ ಅನಿಸಿಕೆಯನ್ನು ಹಂಚಿ ತಮ್ಮ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಮಿ ಎಂಡ್ ಮೈ ಫ್ರೆಂಡ್ಸ್ ಗ್ರೂಪ್ ಬಿಸಿಕೆ ಕಾಮರ್ಸ್ -86 ಎಂಬ ಶಾಶ್ವತ ಗುರುತು ಕಾರ್ಡನ್ನು ಧರಿಸಿ ಎಲ್ಲ ವಿದ್ಯಾರ್ಥಿಗಳು ಒಂದಾಗಿ ಈ ಎಲ್ಲ ಗುರುವೃಂದದವರಿಗೆ ಪೇಟಾ ಶಾಲು ಹಣ್ಣು ಹಂಪಲು ನೀಡಿ ಸನ್ಮಾನಿಸುವುದರ ಮೂಲಕ ಗುರುವಂದನೆ ಸಲ್ಲಿಸಲಾಯಿತು.

Click here

Click here

Click here

Click Here

Call us

Call us

ಹಲವು ವಿದ್ಯಾಥಿಗಳು ಕಾಲೇಜು ಜೀವನದಿಂದ ತಮ್ಮ ಬದುಕಿನಲ್ಲಾದ ಬದಲಾವಣೆ ಬೆಳವಣಿಗೆಯನ್ನು ವಿವರಿಸಿದರು. ದುಬೈ, ಮಸ್ಕತ್, ಮುಂಬಯಿ, ಚೆನ್ನೈ, ಬೆಂಗಳೂರು, ಹೊಸಪೇಟೆ, ಬೆಳಗಾವಿ, ತುಮಕೂರು, ಹರಿಹರ, ಶಿವಮೊಗ್ಗ ಎಂತಂದು ಬೇರೆ ಬೇರೆ ನಗರದ ಸುಮಾರು ೭೦ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಹಿತ ಪಾಲ್ಗೊಂಡ ಈ ಮಿತ್ರೋತ್ಸವದಲ್ಲಿ ಹಲವು ಉದ್ಯಮಿಗಳು ತಮ್ಮ ತಮ್ಮ ಉತ್ಪಾದನೆಯನ್ನು ಹಾಗೂ ಕೃತಿಗಳನ್ನು ಉಡುಗೊರೆಯಾಗಿ ಎಲ್ಲ ಮಿತ್ರರಿಗೂ ವಿತರಿಸಿದರು.

ಆರಂಭದಲ್ಲಿ ಶ್ರೀಮತಿಯರಾದ ಆಶಾ ಉಷಾ ಲತಾ ವೀಣಾ ಭಾಗ್ಯಾ ಪ್ರಾರ್ಥಿಸಿ ಗೌತಮ್ ಶೆಣೈ ಸ್ವಾಗತಿಸಿದರು. ದಯಾನಂದ ಗಂಗೊಳ್ಳಿ ವಂದಿಸಿ ಓಂಗಣೇಶ್ ಉಪ್ಪುಂದ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

 

Leave a Reply