ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರಾಹಿ ಯೋಜನೆ ಸಂತ್ರಸ್ಥರಿಗೆ ಒಂದು ವಾರದೊಳಗೆ ಪರಿಹಾರ ನೀಡಿ, ವಾರಾಹಿ ಯೋಜನೆ ಸಂಬಂಧ ಇದುವರೆಗೂ ಬಾಕಿ ಇರುವ ಪ್ರಕರಣ ಮತ್ತು ಇಂದು ಸ್ವೀಕರಿಸಿರುವ ದೂರುಗಳ ಅ.೨೮ ರೊಳಗೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತವಾರಿ ಸಚಿವ ಪ್ರಮೋದ್ ಮಧ್ವಾರಜ್ ತಾಕೀತು ಮಾಡಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಾರಾಹಿ ಯೋಜನಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಕ್ಕುಂಜೆ ಗ್ರಾಮದ ಸಾದಮ್ಮ ಶೆಡ್ತಿ 24 ಸೆಂಟ್ಸ್ ಜಮೀನು ಈ ಹಿಂದೆ ಭೂ ಸ್ವಾಧೀನದಿಂದ ಕೈಬಿಡಲಾಗಿದ್ದರೂ ಪ್ರಸ್ತುತ ಅವರಿಗೆ ಯಾವುದೇ ಮಾಹಿತಿ ನೀಡದೆ ಅವರ ಜಮೀನಿನಲ್ಲಿ ಕಾಮಗಾರಿ ನೆಡೆಯುತ್ತಿದೆ. ವಾರಾಹಿ ಮುಖ್ಯ ಇಂಜಿನಿಯರರು ಪರಿಶೀಲನೆ ನೆಡಸಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. ವಾರಾಹಿ ಯೋಜನೆಗೆ ಸಂಬಂದಪಟ್ಟ ಸಾರ್ವಜನಿಕರ ವಿವಿಧ ದೂರು, ಸೂಕ್ತ ಪರಿಹಾರ ನೀಡುವ ಕುರಿತಂತೆ ಎಲ್ಲಾ ಪ್ರಕರಣ ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಹಾಗೂ ಅಧಿಕಾರಿಗಳಿಗೆ ಬಂದ ಸಾರ್ವಜನಿಕರ ಅರ್ಜಿ ವಿಲೇವಾರಿಯಾಗುವವರೆಗೂ ನಿಗಾ ಇಡಿ ಎಂದು ಹೇಳಿದರು.
ಎಡದಂಡೆಯಲ್ಲಿ ನೀರು ಬಿಡುವ ಬಗ್ಗೆ ಅನಿಶ್ಚತತೆ ಇದೆ, ಕಾಲುವೆಯಲ್ಲಿ ನೀರು ಬಿಡುವ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುವಂತೆ ಹಾಗೂ ಬಾಕಿ ಕಾಮಗಾರಿ ಶೀಘ್ರದಲ್ಲಿ ಮುಕ್ತಯಾಗೊಳಿಸುವಂತೆ ರೈತರು ಒತ್ತಾಯಿಸಿದರು. ಎಡದಂಡೆಯಲ್ಲಿ 32-35 ಕಿಮೀ ಟೆಂಡರ್ ಆಗಿದ್ದು ಕಾಮಗಾರಿ ನಡೆಯುತ್ತಿದೆ, ಮಾರ್ಚ್ 18 ರೊಳಗೆ ಮುಕ್ತಯಗೊಳ್ಳಲಿದೆ, 7 ಡಿಸ್ಟ್ರಿಬ್ಯೂಷನ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ, 38-44 ಕಿಮೀ ಕೊನೆಯ ಹಂತಆಗಿದ್ದುಇದು ಮುಕ್ತಾಯಗೊಂಡರೆ ತೆಕ್ಕಟ್ಟೆಯ ವರೆಗೆ ನೀರಾವರಿ ಸೌಲಭ್ಯದೊರೆಯಲಿದೆ, ಬಲದಂಡೆಯಲ್ಲಿ ೭೦ ಎಕ್ರೆ ಅರಣ್ಯ ಭೂಮಿಇದ್ದು, ಈ ಕುರಿತು ನಿರಾಪೇಕ್ಷಣೆದೊರೆತಲ್ಲಿ ಬಲದಂಡೆಕಾಮಗಾರಿ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಾರ್ದಳ್ಳಿ ಮಂಡಳ್ಳಿ ಬಳಿ ವಾರಾಹಿ ಯೋಜನೆಯಡಿ ನಿರ್ಮಿಸಲಾಗಿದ ಸರ್ವಿಸ್‌ರಸ್ತೆಗೆ ಕೆಲವರು ಅಕ್ರಮವಾಗಿ ಬೇಲಿ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ದೂರಿಗೆ ಸ್ಪಂದಿಸಿದ ಮಧ್ವರಾಜ್, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ೨೪ ಗಂಟೆಯೊಳಗೆ ಬೇಲಿ ತೆರವುಗೊಳಿಸಿ , ಸಂಬಂಪಟ್ಟವರ ವಿರುದ್ದ ಕ್ರಮತೆಗೆದುಕೊಳ್ಳಲು ಕೋಟಾಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು. ಅಧಿಕಾರಿಗಳು ವಾರಾಹಿ ಪ್ರದೇಶದ ರೈತರೊಂದಿಗೆ ಉತ್ತಮ ಬಾಂಧವ್ಯಇಟ್ಟುಕೊಂಡು ಕಾರ್ಯನಿರ್ವಹಿಸಿ, ಆ ಭಾಗದಜನರ ಸಹಭಾಗಿತ್ವದಲ್ಲಿ ಯೋಜನೆಅನುಷ್ಠಾನಗೊಳಿಸಿ ಎಂದು ಸಚಿವರುಸೂಚಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌ಸಿ.ಟಿ., ಉಪಸ್ಥಿತರಿದ್ದರು.
4000 ಹೆಕ್ಟೇರಿಗೆ ಮಾತ್ರ ನೀರು.
ವಾರಾಹಿ ಯೋಜನೆಯಿಂದ 15,000 ಹೆಕ್ಟೆರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದರೂ, ಕಳೆದ 32 ವರ್ಷದಲ್ಲಿ ಕೇವಲ 4,000 ಹೆಕ್ಟೇರ್‌ಮಾತ್ರ ನೀರು ಒದಗಿಸಲಾಗಿದೆ, ಹಲವು ಗ್ರಾಮಗಳಿಗೆ ಇನ್ನೂ ನೀರಾವರಿ ಸೌಲಭ್ಯ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದರು.