ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘದ 12ನೇ ವಾರ್ಷಿಕ ಸಮಾವೇಶವು ಬ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಎ. ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಮುಂದಿನ ಎರಡು ವರ್ಷಗಳಿಗೆ ನೂತನ ಅಧ್ಯಕ್ಷರಾಗಿ ಹೆಚ್. ವಸಂತ ಹೆಗ್ಡೆ, ಉಪಾಧ್ಯಕ್ಷರಾಗಿ ಎಸ್. ಅಣ್ಣಪ್ಪ ಶೆಟ್ಟಿ, ಕಾರ್ಯದರ್ಶಿಯಾಗಿ ಸಿ. ಸಚ್ಚಿದಾನಂದ ಶೆಟ್ಟಿ, ಕೋಶಾಧಿಕಾರಿಯಾಗಿ ಕೆ. ಜಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ವೇಣುಗೋಪಾಲ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ. ಟಿ. ಹೆಗ್ಡೆ, ಎನ್ ಜಯರಾಮ ಶೆಟ್ಟಿ, ಕೆ. ರವೀಂದ್ರನಾಥ ಶೆಟ್ಟಿ, ಶ್ರೀಮತಿ ಮಾಲಿನಿ ಶೆಟ್ಟಿ, ಎ. ಭುಜಂಗ ಶೆಟ್ಟಿ, ಕೆ. ಸದಾನಂದ ಹೆಗ್ಡೆ, ಎ. ಜಯಕರ ಶೆಟ್ಟಿ, ಎಸ್ ಜಯರಾಮ ಹೆಗ್ಡೆ ಮತ್ತು ಯು. ಪ್ರಭಾಕರ ಶೆಟ್ಟಿಯವರು ಅಯ್ಕೆಯಾದರು.
ಸಂಸ್ಥೆಯ ಕಳೆದ ಎರಡು ವರ್ಷಗಳ ಸೇವಾ, ಸೌಹಾರ್ದ ಚಟುವಟಿಕೆಗಳು, ಮನೋರಂಜನಾ ಕಾರ್ಯಕ್ರಮಗಳು, ಆರೋಗ್ಯ ಮಾಹಿತಿ ಗೋಷ್ಠಿಗಳ ಬಗ್ಗೆ ಮತ್ತು ಮುಂದಿನ ಸೇವಾ ಮತ್ತು ಹಿತರಕ್ಷಣಾ ಚಟುವಟಿಕೆಗಳ ಬಗ್ಗೆ ಯು.ಕೆ. ವಾಸುದೇವ ಶೆಟ್ಟಿಯವರು ವರದಿಯನ್ನು ಮಂಡಿಸಿದರು.
ಮಂಗಳೂರಿನ ಎಲ್.ಎಚ್. ಎಚ್. ರಸ್ತೆಯ ನಾಮಕರಣ ತಡೆಯಾಜ್ಞೆ ತೆರವು ಗೊಳಿಸಿ ಮೂಲ್ಕಿ ಸುಂದರಾಮ್ ಶೆಟ್ಟಿಯವರ ಹೆಸರನ್ನು ನಮೂದಿಸಲು ಮನವಿ ಸಲ್ಲಿಸುವರೆ, ಈ ಸಭೆಯಲ್ಲಿ ಠರಾವು ಮಾಡಲಾಯಿತು. ವಿವಿಧ ಹಿರಿಯ ಅಧಿಕಾರಿಗಳು ತಮ್ಮ ಸಲಹೆ ಸೂಚನೆಯೊದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಾಪಕಾಧ್ಯಕ್ಷರಾದ ಶ್ರೀಯುತ ವಿ. ಸುಬ್ಬಯ್ಯ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಎ. ಎಸ್ ಹೆಗೆ, ಎಸ್. ಜಯಕರ ಶೆಟ್ಟಿ, ಉಪಾಧ್ಯಕ್ಷರಾದ ಕೆ.ಸಿ. ಶೆಟ್ಟಿಯವರು ಉಪಸ್ಥಿತರಿದ್ದರು. ಯು. ಕೆ. ವಾಸುದೇವ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು, ಸಿ. ಸುಧಾಕರ್ ನಂಬಿಯಾರ್ ನಿರ್ವಾಚನಾಧಿಕಾರಿಯಾಗಿ ಕಾರ್ಯಕ್ರಮ ಸಂಯೋಜಿಸಿದರು.