ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ಕ್ರೀಡಾಪಟು ಕಾವ್ಯಾ ಪೂಜಾರಿ ಸಾವಿನ ಕುರಿತು ಸಮಗ್ರ ತನಿಕೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭನೆ ಜರುಗಿತು.
ಎಬಿವಿಪಿ ಪ್ರಮಖ ವಿಶ್ವನಾಥ ಮಾತನಾಡಿ ಕಾವ್ಯ ಸಾವಿನ ಸುತ್ತ ಹಲವು ಅನುಮಾನಗಳಿದ್ದು ಸಾವಿನ ಕುರಿತಾಗಿ ಪೊಲೀಸ್ ಇಲಾಖೆ ವಸ್ತುನಿಷ್ಠ ತನಿಕೆ ನಡೆಸಬೇಕಿದೆ. ಒಬ್ಬ ಕ್ರೀಡಾಪಟು ಮೃತಪಟ್ಟ ರೀತಿ ಹಾಗೂ ಆಕೆಯ ಸಾವಿನ ಬಳಿಕ ಕಾಲೇಜು ಮೃತದೇಹವನ್ನು ಕೂಡಲೇ ಶವಾಗಾರದಲ್ಲಿ ಇರಿಸಿದ್ದು ಹಾಗೂ ಆ ಬಳಿಕದ ಘಟನೆಗಳು ಸಹಜವಾಗಿ ಗೊಂದಕ್ಕೆ ಎಡೆಮಾಡಿಕೊಡುತ್ತಿವೆ. ಹಾಗಾಗಿ ಸೂಕ್ತ ತನಿಕೆ ಮಾಡುವುದರೊಂದಿಗೆ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ. ತನಿಕೆಯ ಮೂಲಕ ಜನರಲ್ಲಿ ವ್ಯಕ್ತವಾಗುತ್ತಿರುವ ಆತಂಕ ಹಾಗೂ ಗೊಂದಲವನ್ನು ನೀವಾರಿಸಬೇಕಿದೆ. ಸೂಕ್ತ ತನಿಕೆ ನಡೆಯದಿದ್ದರೆ ಎಬಿವಿಪಿ ಮತ್ತೆ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
ಕುಂದಾಪುರ ಶಾಸ್ತ್ರೀವೃತ್ತದಿಂದ ಮಿನಿವಿಧಾನಸೌದದ ತನಕ ಪ್ರತಿಭಟನಾ ರ‍್ಯಾಲಿ ನಡೆಸಿದ ವಿದ್ಯಾರ್ಥಿಗಳು ಬಳಿಕ ತಹಶೀಲ್ದಾರ್ ಬೋರ್ಕರ್ ಅವರ ಮೂಲಕ ಸಂಬಂಧಿತ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಕುಂದಾಪುರ ಘಟಕದ ಸಂಚಾಲಕ ವೈಭವ್ ಕುಂದಾಪುರ, ಕಾರ್ಯದರ್ಶಿ ಸುಕೇಶ್, ಶ್ವೇತಾ, ವಿನಯಾ, ಸುದೀಪ್, ಸುಮಂತ್, ವಿಶ್ವನಾಥ, ಪ್ರವೀತಾ, ರೋಶನ್ ಪಿಂಟೋ, ಉನ್ನತಿ, ಸುದೀಪ್, ಸುಮಂತ್, ರೋಶನ್ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಾವಿರಾರು ವಿದಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಸೂಕ್ತ ತನಿಕೆಗಾಗಿ ಆಗ್ರಹಿಸಿದರು.