ಇತರೆ ಭಾಷೆಗಳ ಕಲಿಕೆಗೆ ಮಾತೃಭಾಷೆಯೇ ತಳಹದಿ: ಕನರಾಡಿ ವಾದಿರಾಜ ಭಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಹಂತದಲ್ಲಿ ಇಂಗ್ಲೀಷ್‌ನಂತಹ ಇತರೇ ಭಾಷೆಗಳಲ್ಲಿ ಮಗು ಪ್ರಭುತ್ವವನ್ನು ಸ್ಥಾಪಿಸಬೇಕಾದರೆ ಮಾತೃಭಾಷೆಯಲ್ಲಿ ಗಟ್ಟಿತನವಿರಬೇಕು. ಮಾತೃಭಾಷೆಯನ್ನೇ ಸರಿಯಾಗಿ ಕಲಿಯಲಾರದ ಮಗುವಿಗೆ ಎಂದು ಅಪರಿಚಿತವಾದ ಇನ್ನೊಂದು ಭಾಷೆ ಬೌದ್ಧಿಕ ಹೊರೆ. ಆದ್ದರಿಂದ ಪೋಷಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ,ಕನಿಷ್ಟ ಐದನೇ ತರಗತಿಯವರೆಗಾದರೂ ಮಕ್ಕಳಿಗೆ ತಮ್ಮ ಮಾತೃಭಾಷೆಯ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಬೇಕು ಎಂದು ಪ್ರಖ್ಯಾತ ಚಿಂತನಕಾರರಾದ ಕನರಾಡಿ ವಾದಿರಾಜ ಭಟ್ ಅಭಿಪ್ರಾಯ ಪಟ್ಟರು.

Call us

Click Here

ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨ನೇ ತರಗತಿಯ ಜೀವನ್ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಂದೆ ಜ್ಯೋತಿ-ಚಂದ್ರ ಅವರು ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೬ನೇ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ತಿಂಗಳ ಕಲಿಕಾ ಪ್ರದರ್ಶನದ ಎರಡನೇ ಕಾರ್ಯಕ್ರಮ, ದಶಪ್ರಶ್ನೆ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮ ಹಾಗೂ ಸರ್ವಪೋಷಕರ ಸಭೆಯು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಹೆಬ್ಬಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮನೋಜ್‌ಕುಮಾರ್ ಶೆಟ್ಟಿ, ಬಿದ್ಕಲ್‌ಕಟ್ಟೆ ಸಿ.ಆರ್.ಪಿ ಸುಧಾಕರ ಶೆಟ್ಟಿ, ಎಸ್.ಡಿ.ಎಂ,ಸಿ ಸದಸ್ಯರಾದ ಜ್ಯೋತಿ, ಪೋಷಕರಾದ ಗೋಪಾಲಕೃಷ್ಣ, ಮುಖ್ಯೋಪಾಧ್ಯಾಯರಾದ ನಾಗರತ್ನ ಹೆಬ್ಬಾರ್, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ರಮಣಿ, ಜ್ಯೋತಿಲಕ್ಷ್ಮಿ, ಚಿತ್ರಾ, ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ, ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ, ವೇದಾವತಿ, ವಿದ್ಯಾರ್ಥಿಗಳು ಹಾಗೂ ಸರ್ವ ಪೋಷಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ನಾಗರತ್ನ ಸ್ವಾಗತಿಸಿದರೆ, ಸಹಶಿಕ್ಷಕಿ ಚಿತ್ರಾ ಕುಮಾರಿ ವಂದಿಸಿದರು. ಚಾರಣದ ಸಂಪಾದಕರಾದ ಸಹಶಿಕ್ಷಕ ಸತೀಶ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply