ನಿವೃತ್ತಿ ಹೊಂದಿದ ಉಪ ವಲಯ ಅರಣ್ಯಾಧಿಕಾರಿಗೆ ಬಿಳ್ಕೋಡುಗೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಲಯದ ಅರಣ್ಯ ಇಲಾಖೆಯ ವತಿಯಿಂದ ನಲವತ್ತು ವರುಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉಪ ವಲಯ ಅರಣ್ಯಾಧಿಕಾರಿ ಬೈಂದೂರು ನಿವಾಸಿ ಸುಬ್ರಾಯ ಅಲಿಯಾಸ್ ನಾಗೇಶ ಇವರನ್ನು ಕುಂದಾಪುರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬಿಳ್ಕೋಡಲಾಯಿತು.

Call us

Click Here

ಕಾರ್ಯದಕ್ಷತೆ,ಸಮಯ ಪಾಲನೆಗೆ ಹೆಸರು ವಾಸಿಯಾದ ಉತ್ತಮ ವ್ಯಕ್ತಿತ್ವ ಹೊಂದಿದ ಅನುಭವಿ ಹಿರಿಯ ಅಧಿಕಾರಿಯಾದ ಸುಬ್ರಾಯ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಹಾರೈಸಿದರು. ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗೆ ನಿವೃತ್ತಿಯು ಅನಿವಾರ್ಯ ಆದರೆ ಪ್ರಾಮಾಣಿಕ ಅಧಿಕಾರಿಯನ್ನು ಬಿಳ್ಕೋಡುವುದು ಅಷ್ಟೇ ಬೇಸರದ ಸಂಗತಿ ಎಂದರು.

ಉಪ ವಲಯ ಅರಣ್ಯಾಧಿಕಾರಿ ನವೀನ್ ಡಿಸೋಜಾ ಮಾತನಾಡಿ, ಮಹಾ ಭಾರತದ ಆ ಭೀಷ್ಮನಂತೆ ಅರಣ್ಯ ಇಲಾಖೆಯ ಈ ಭೀಷ್ಮನಿಗಿಂದು ಗೌರವಿಸುವ ಸಮಯ. ಇಲಾಖೆಯ ಕಾನೂನು ವಿಚಾರ, ಕರ್ತವ್ಯ ನಿರ್ವಹಣೆಯ ಛಲವನ್ನು ನಾವು ಇವರಿಂದ ಕಲಿಯ ಬೇಕಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ, ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ್, ದಿಲೀಪ್ ಕುಮಾರ್, ಉದಯ.ಬಿ, ನವೀನ್ ಡಿಸೋಜಾ, ಹೇಮಾ, ಜಡ್ಕಲ್ ಘಟಕದ ಅರಣ್ಯ ರಕ್ಷಕರಾದ ಸಂತೋಷ್ ದೇವಾಡಿಗ, ಅಭಿಲಾಷ್ ಮತ್ತು ಕುಂದಾಪುರ ವಲಯದ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply