ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇತ್ತಿಚಿಗೆ ಮೃತರಾದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಅವರ ಸಾವು ಅನುಮಾನಾಸ್ಪದವಾಗಿದ್ದು ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ನಾವುಂದ ರಿಚರ್ಡ್ ಅಲ್ಮೇಡ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾವ್ಯ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ವಿದ್ಯಾರ್ಥಿ ಸಮೂಹ ಆತಂಕಗೊಳ್ಳುವಂತಾಗಿದೆ. ಪ್ರಕರಣದ ಕುರಿತಾಗಿ ಪೊಲೀಸರು ಸೂಕ್ತ ತನಿಕೆ ಕೈಗೊಂಡು ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜಿನಿಂದ ನಾವುಂದ ಗ್ರಾಮ ಪಂಚಾಯತ್ ತನಕ ಪ್ರತಿಭಟನಾ ರ‍್ಯಾಲಿಯಲ್ಲಿ ತೆರಳಿದ ವಿದ್ಯಾರ್ಥಿಗಳು ನಾವುಂದ ಪಂಚಾಯತ್ ಪಿಡಿಒ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಅಕ್ಷಯ್, ಯಾಸಿನ್, ಸುಭಾಷ್, ವಿಜಯ್, ಅಶ್ವಿನಿ, ಪ್ರವೀಣ್ ಖಾರ್ವಿ, ಯಜ್ಞೇಶ್, ಕಿರಣ್ ಆಚಾರ್ಯ, ರಂಜಿತ್, ಸುಷ್ಮಾ, ನಿಧಿ ನಾಯಕ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.