ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ), ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಹಾಗೂ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯು ನಾಗರಾಜ್ ಭಟ್, ಮಲ್ಪೆ ಇವರ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಡಿನಾಡ ತಿರುಗಾಟ ಶಾಲೆಯೆಡೆಗೆ ಗೊಂಬೆ ನಡಿಗೆ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.
ಗೊಂಬೆಯಾಟ ಟ್ರಸ್ಟ್ ಅಸ್ತಿತ್ವ ಕಂಡು 22 ವರ್ಷಗಳ ಸವಿನೆನಪಲ್ಲಿ ಸೆಪ್ಟೆಂಬರ್ 1ರಿಂದ 15ರವರೆಗೆ ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ತಾಲೂಕಿನ ಒಟ್ಟು 22 ಶಾಲೆಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಲಿದೆ.
ಕರಾವಳಿ ತೀರದ 350 ವರ್ಷಗಳ 6 ನೇ ತಲಾಂತರದ ವಿಶಿಷ್ಟ, ವಿಶೇಷ ಕಲಾ ಪರಂಪರೆಯ ಉಳಿವಿಗಾಗಿ ಹಗಲಿರುಳೆನ್ನದೆ ಹೋರಾಟ ಮಾಡುತ್ತಾ ಬಂದಿರುವ ಸಂಸ್ಥೆಯು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡದಲ್ಲಿ ಕಳೆದ ೩ ವರ್ಷಗಳಿಂದ ನಿರಂತರ ತಿಂಗಳ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಂಡು ಬರುತ್ತಿದೆ. ಸರಕಾರದ ಯಾವುದೇ ಧನ ಸಹಾಯ ಪಡೆಯದೆ ಹೋರಾಡುತ್ತಿರುವುದು ಈ ತಂಡದ ವಿಶೇಷವೆನ್ನಬಹುದು. ಸಾರ್ವಜನಿಕರ, ಪ್ರೋತ್ಸಾಹಕರ ನೆರವಿನೊಂದಿಗೆ ಅನೇಕ ದಿಟ್ಟ ಹೆಜ್ಜೆ ಇರಿಸಿ ಮಾಡಿ ತೋರಿಸಿದೆ.
ಸೆ. 01ರಂದು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ, ಮಾವಿನಕಟ್ಟೆ ಯಲ್ಲಿ ಶಾಲೆಯೆಡೆಗೆ ಗೊಂಬೆ ನಡಿಗೆ ಉದ್ಘಾಟನೆಗೊಳ್ಳಲಿದೆ. ಅನಂತರ ಸೆ.04ರಿಂದ 15ರೊಳಗೆ ಸರಸ್ವತಿ ಪದವಿ ಪೂರ್ವ ಕಾಲೇಜು ಕುಮಟಾ, ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಗೇರುಸೊಪ್ಪೆ, ಎಸ್.ಡಿ.ಎಂ. ಕಾಲೇಜು, ಹೊನ್ನಾವರ, ದ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜು, ಅಯೋಧ್ಯಾನಗರ, ಭಟ್ಕಳ, ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ) ಬ್ರಹ್ಮಾವರ, ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ, ಮುಕುಂದ ಕೃಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉಡುಪಿ, ಮಾಧವ ಕೃಪ ಇಂಗ್ಲಿಷ್ ನರ್ಸರಿ ಮತ್ತು ಹೈಯರ್ ಪ್ರೈಮರಿ ಸ್ಕೂಲ್, ಮಣಿಪಾಲ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ, ಸರಕಾರಿ ಪದವಿಪೂರ್ವ ಕಾಲೇಜು, (ಪ್ರೌಢ ಶಾಲಾ ವಿಭಾಗ) ಕುಂದಾಪುರ, ಶಾರದಾ ಕಾಲೇಜ್ ಬಸ್ರೂರು, ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಶಿಯಲ್ ಸ್ಕೂಲ್, ಹಟ್ಟಿಯಂಗಡಿ, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ ವಂಡ್ಸೆ, ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜು ಕೊಲ್ಲೂರು, ಗ್ರೆಗರಿ ಪ್ರೌಢ ಶಾಲೆ ನಾಡ- ಪಡುಕೋಣೆ, ಸರಕಾರಿ ಪ್ರೌಢ ಶಾಲೆ ಹಕ್ಲಾಡಿ, ಶ್ರೀ ಸರಸ್ವತಿ ವಿದ್ಯಾಲಯ ಗಂಗೊಳ್ಳಿ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ, ಗೋವಿಂದದಾಸ್ ಕಾಲೇಜು ಸುರತ್ಕಲ್, ಕೆನರಾ ಹೈಸ್ಕೂಲ್ ಮಂಗಳೂರು, ಹೆಚ್. ಹೆಚ್. ಎಸ್. ಐ. ಬಿ. ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಸ್ಕೂಲ್ ಎಡನೀರು ಕಾಸರಗೋಡಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತರು ತಿಳಿಸಿದ್ದಾರೆ.