ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್‌ಕಟ್ಟೆ, ಇಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಭಗತ್‌ಸಿಂಗ್ ರೋವರ್ ಘಟಕವು ಇತ್ತೀಚೆಗೆ ಕ್ವಿಟ್ ಇಂಡಿಯಾ ಡೇ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಕಾಲೇಜಿನ ಸುತ್ತಮುತ್ತಲಿನ ಪ್ರಯಾಣಿಕರ ತಂಗುದಾಣಗಳಲ್ಲಿ ನಡೆಸಿತು. ಬಿದ್ಕಲ್‌ಕಟ್ಟೆ ಮುಖ್ಯ ಪೇಟೆಯ ಬಸ್ ತಂಗುದಾಣ, ಕಾಲೇಜಿನ ಮುಂಭಾಗದಲ್ಲಿರುವ ಬಸ್ ತಂಗುದಾಣ, ಹಾಗೂ ಗುಡ್ಡೆ ಅಂಗಡಿಯಲ್ಲಿನ ಬಸ್ ತಂಗುದಾಣಗಳನ್ನು ಭಗತ್‌ಸಿಂಗ್ ರೋವರ್ ಸದಸ್ಯರು ಸ್ವಚ್ಛತಾ ಕಾರ್ಯ ನೆರವೇರಿಸಿದರು. ಪ್ರಾಂಶುಪಾಲರಾದ ರಾಮ ಹೆಚ್.ನಾಯಕ್ ರೋವರ್‌ಗಳನ್ನು ಅಭಿನಂದಿಸಿದರು. ರೋವರ್ ಸ್ಕೌಟ್ ಲೀಡರ್ ಮತ್ತು ಉಪನ್ಯಾಸಕ ರವಿಚಂದ್ರ ಮಾರ್ಗದರ್ಶನ ಮಾಡಿದರು.