ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ವಾಟ್ಸ್‌ಪ್ ಗ್ರೂಪ್‌ಗಳ ಮೂಲಕ ಯುವಕರ ಹಾಡು ಹರಟೆ ಮಾತ್ರ ನಡೆಯದೇ ಆಗಾಗ್ಗೆ ಬಡವರ ಕಣ್ಣೀರೊರೆಸುವ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇತ್ತಿಚಿಗೆ ನಮ್ಮ ಗೂಡು ವಾಟ್ಸಪ್ ಗ್ರೂಪ್ ಸದಸ್ಯರು ನಮ್ಮ ಪ್ರೀತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಿಕ್ಷುಕರಿಗೆ ಮನೆಯಲ್ಲಿಯೇ ರುಚಿಕರ ಊಟ ತಯಾರಿಸಿ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿತರಿಸಿದರು.
ಕುಂದಾಪುರ ತಾಲೂಕಿನ ವಿವಿಧೆಡೆಯ ಯುವಕರಾದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವಕರುಗಳಾದ ರಾಜ್, ಸತೀಶ್, ಚಂದ್ರಶೇಖರ್, ಶ್ರೀನಿವಾಸ್, ಪ್ರತಾಪ್, ಪ್ರವೀಣ್ ಜೆ, ಗೀತಾ, ರಮ್ಯ, ಸುನಿತಾ, ಅನಿತಾ, ಸೀಮಾ ನಮ್ಮ ಪ್ರೀತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೀಕ್ಷುಕರಿಗೆ ಊಟ ವಿತರಿಸಿ ಮಾದರಿ ಕಾರ್ಯದಲ್ಲಿ ಭಾಗಿಯಾದರು.