ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಟ್ರಸ್ಟ್ ಮೂಲಕ ಇತ್ತಿಚಿಗೆ ಬೈಕ್ ಅಪಘಾತದಲ್ಲಿ ಮರಣ ಹೊಂದಿದ ಗಂಗೊಳ್ಳಿ ಸೀತಾರಾಮ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಮಂಗಳ ಖಾರ್ವಿ ಅವರ ಕುಟುಂಬಕ್ಕೆ ಕೊಡಮಾಡಿದ ಒಂದು ಲಕ್ಷ ರೂ. ಚೆಕ್‌ನ್ನು ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಅವರು ಕುಟುಂಬಿಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ತಾಲೂಕು ನವೋದಯ ಸಂಘಗಳ ಮೇಲ್ವಿಚಾರಕ ಮನೋಹರ ಶೆಟ್ಟಿ, ಬೈಂದೂರು ವಲಯ ನವೋದಯ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ತ್ರಾಸಿ ಡಿಸಿಸಿ ಬ್ಯಾಂಕ್ ಮ್ಯಾನೆಜರ್ ನಾಗ ಹಾಗೂ ಪ್ರೇರಕ ವಾಸುದೇವ ಖಾರ್ವಿ, ಜ್ಯೋತಿಕೃಷ್ಣ ಇದ್ದರು.