ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಕೃತಿಯಲ್ಲಿರುವ ಹಲವು ಬಗೆಯ ಸಸ್ಯ ಪ್ರಭೇದಗಳು ಹಲವು ಪ್ರಯೋಜನಕಾರಿಯಾಗಿವೆ ಅದರಂತೆ ಶಿವನ ಸಾನಿಧ್ಯವಿರುವ ಬಿಲ್ವ ವೃಕ್ಷವನ್ನು ಸ್ಪರ್ಶಿಸುವುದರಿಂದಲೇ ಪಾಪ ಕ್ಷಯಿಸುವುದು. ಅಂತಹ ಸಸ್ಯ ಪ್ರಭೇದಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮದಾಗಿರಬೇಕು ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿವರು ನುಡಿದರು.
ಅವರು ಕೋಟೇಶ್ವರ ಸಮೀಪದ ಶಾಂತಿಧಾಮ ಗುರುಕುಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಲ್ವ ಸಸಿಗಳನ್ನು ವಿತರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಸೇವಾ ಬಳಗದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ವ್ಯಾಪಾರೋದ್ಯಮಿ ವಿಠಲ ಪೈ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಕೃಷ್ಣರಾಯ ಶ್ಯಾನುಭಾಗ್ ಸ್ವಾಗತಿಸಿ, ವಂದಿಸಿದರು.