ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯಾಂತ್ಯದ ಕಳೆದ ನಾಲ್ಕು ವರ್ಷಗಳಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರು ಹಾಗೂ ಯುವಕರ ಹತ್ಯೆ ಖಂಡಿಸಿ, ಕೆಎಫ್‌ಡಿ ಹಾಗೂ ಪಿಎಫ್‌ಐ ಸಂಘಟನೆ ನಿಷೇಧ ಹಾಗೂ ಸಚಿವ ರಮಾನಾಥ ರೈ ಅವರ ರಾಜಿನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಮಂಗಳೂರು ಚಲೋ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು ಕುಂದಾಪುರ ಹಾಗೂ ಹೆಮ್ಮಾಡಿಯಿಂದ ಬೈಕ್ ರ‍್ಯಾಲಿಯಲ್ಲಿ ಹೊರಟ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪೊಲೀಸರು ತಡೆಯೊಡ್ಡಿ ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆಯಿತು.
ಕುಂದಾಪುರದಲ್ಲಿ ಜರುಗಿದ ಬೈಕ್ ರ‍್ಯಾಲಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಬಿಜೆಪಿ ಹಿಂದೂಳಿದ ಮೋರ್ಚಾಗಳ ಅಧ್ಯಕ್ಷ ರಾಜೇಶ್ ಕಾವೇರಿ, ಮುಖಂಡರುಗಳಾದ ದಿನಕರ್ ಬಾಬು, ಕಿರಣಕುಮಾರ್ ಕೊಡ್ಗಿ, ಮಹೇಶ್ ಕುಮಾರ್, ವಿಠಲ ಪೂಜಾರಿ, ಸದಾನಂದ ಬಳ್ಕೂರು ಸತೀಶ್ ಪೂಜಾರಿ ವಕ್ವಾಡಿ ಮೊದಲಾದವರು ಭಾಗವಹಿಸಿದ್ದರು.
ಹೆಮ್ಮಾಡಿಯಲ್ಲಿ ಜರುಗಿದ ಬೈಂದೂರು ಮಂಡಲದ ಯುವ ಮೋರ್ಚಾ ಬೈಕ್ ರ‍್ಯಾಲಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಶ್ರೀಶ ನಾಯಕ್, ನಾಯಕರಾದ ಯಶಪಾಲ್ ಸುವರ್ಣ, ದೀಪಕ್‌ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಪ್ರಿಯದರ್ಶಿನಿ ದೇವಾಡಿಗ, ಬೈಂದೂರು ಯುವ ಮೊರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ ಸೇರಿದಂತೆ ಹಲವರು ಭಾಗವಹಿಸಿದ್ದರು.