ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆದೂರಿನ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿರಂಜನ ಶೆಟ್ಟಿಗೆ ವೈದ್ಯಕೀಯ ಶಿಕ್ಷಣಕ್ಕೋಸ್ಕರ ರೂ ೧ ಲಕ್ಷವನ್ನು ಕುಂದಾಪುರ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ವತಿಯಿಂದ ನೀಡಲಾಯಿತು. ಚೆಕನ್ನು ಹಿರಿಯ ವೈದ್ಯ ಹಾಗೂ ಹಿರಿಯ ಸದಸ್ಯ ಲಯನ್ ಡಾ| ಎಂ. ವಿ. ಕುಲಾಲ ಹಸ್ತಾಂತರಿಸಿದರು. ಸಮಾರಂಭದಲ್ಲಿ ಅತಿಥಿ ಡಾ| ಆದರ್ಶ ಹೆಬ್ಬಾರ್, ಕ್ಲಬಿನ ಅಧ್ಯಕ್ಷ ಲಯನ್ ಎ.ಮೋಹನ ಶೆಟ್ಟಿ, ಕಾರ್ಯದರ್ಶಿ ನವೀನ ಕುಮಾರ ಶೆಟ್ಟಿ, ಕೋಶಾಧಿಕಾರಿ ಪ್ರಜ್ಞೇಶ್ ಪ್ರಭು, ಲಯನಸ್ ಕ್ಲಬ್‌ನ ಅಧ್ಯಕ್ಷೆ ಭವಾನಿ ಶೆಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಎನ್. ಶೆಟ್ಟಿ, ಕೋಶಾಧಿಕಾರಿ ವಿನಯ ಪ್ರಭುರವರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್‌ನಿಂದ ವಿದ್ಯಾರ್ಥಿಯ ವೈದ್ಯಕೀಯ ಶಿಕ್ಷಣಕ್ಕೆ ಧನಸಹಾಯ
