ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯನ್ನು ಮಾದರಿಯಾಗಿ ಮಾಡಲು ತೀರ್ಮಾನಿಸಿದ್ದು ಅದರ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆ.೩೧ರಂದು ವಂಡ್ಸೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವಂಡ್ಸೆ ಪೇಟೆ ಜನವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ವಚ್ಚತೆಯ ಮಹತ್ವ, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ(ಎಸ್.ಎಲ್.ಆರ್.ಎಂ) ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಗುಂಡು ಪೂಜಾರಿ, ಉದಯ ಕೆ.ನಾಯ್ಕ, ಸಿಂಗಾರಿ, ಎಸ್.ಎಲ್.ಆರ್.ಎಂ ತರಬೇತಿ ಪಡೆದ ಮೇಲ್ವಿಚಾರಕ ಮಹಮ್ಮದ್ ರಫೀಕ್ ಸಾಹೇಬ್, ಗೋವರ್ಧನ ಜೋಗಿ, ಅಂಬಿಕಾ, ಅನುಸೂಯ, ಸುಧಾಕರ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಕರ ಆಚಾರ್ಯ, ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಸೇವಾ ಪ್ರತಿನಿಧಿ ಲಾಲಿ ಸೋಜನ್, ಒಕ್ಕೂಟದ ಅಧ್ಯಕ್ಷೆ ಸಂಜೀವಿ, ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಪದಾಧಿಕಾರಿ ಜ್ಯೋತಿ ಅಬ್ಬಿ, ಸಂಘದ ಸದಸ್ಯರಾದ ದಿವಾಕರ ಸುಜಿ, ಗುರುರಾಜ ಗಾಣಿಗ, ಇತರ ಸದಸ್ಯರು, ಆಶಾ ಕಾರ್ಯಕರ್ತೆ ಗುಲಾಬಿ, ಸರೋಜ, ಪಂಚಾಯತ್ ಸಿಬ್ಬಂದಿ ನಾಗರಾಜ ಕರ್ಕಿ, ರಾಮ ಉಪಸ್ಥಿತರಿದ್ದರು.