ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಡಿಗರ ಕಾವ್ಯ ಸಾಂದ್ರ ಅನುಭವ ಮತ್ತು ವಿಚಾರಗಳನ್ನು ಹೊಂದಿದ್ದು. ನಮ್ಮ ಪ್ರಾದೇಶಿಕ ನುಡಿಗಟ್ಟು, ಪುರಾಣ, ಸಾಹಿತ್ಯ, ಯಕ್ಷಗಾನ-ತಾಳ ಮದ್ದಳೆಗಳ ಹಿನ್ನೆಲೆಯಿಲ್ಲದೆ, ಸುಲಭವಾಗಿ ಆಸ್ವಾಧಿಸುವುದು ಕಷ್ಟ. ಅಡಿಗರ ಕಾವ್ಯಾ ಸ್ವಾಹನೆಗೆ ಇಲ್ಲಿನ ಸ್ವಂತಃ ಕವಿಗಳೂ, ವಿಚಾರವಂತರೂ ಆದ ಉಪ್ಪುಂದ ಚಂದ್ರ ಶೇಖರ ಹೊಳ್ಳರ ಕಾವ್ಯ ಪ್ರವೇಶಿಕೆ ಅಡಿಗರ ಶತಾಬ್ದಿ ವರ್ಷಕ್ಕೆ ಪ್ರಮುಖ ಕಾಣೆಕೆ ಎಂದು ಡಾ. ಪ್ರೋ. ಕನರಾಡಿ ವಾದಿರಾಜ ಭಟ್ ಹೇಳಿದರು. ಖಂಬದಕೋಣೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಅಡಿಗರ ಕಾವ್ಯ ಪ್ರವೇಶಿಕೆ ಅಡಿಗರ ಕಾವ್ಯದ ಆಸ್ವಾದನೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಾಂಶುಪಾಲೆ ಜಯಲಕ್ಮ್ಷೀ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕವಿ ಅಡಿಗರ ವಿದ್ಯಾರ್ಥಿ ಪ್ರೋ ಕನರಾಡಿಯವರಿಗೆ ಅಡಿಗ ಜನ್ನ ಶತಾಬ್ಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಧ್ಯಮ ಭಾರತಿ ಬೆಂಗಳೂರಿನ ನಿರ್ದೇಶಕ ಎಂ. ಜಯರಾಮ ಅಡಿಗರು ಪ್ರಾಸ್ತಾವಿಸಿದರು. ಸಾಹಿತಿ ಯು. ರಮೇಶ ವೈದ್ಯ, ಪ್ರಸಾರ ಭಾರತಿ ನಿರ್ದೇಶಕ ಎಂ. ಜಯರಾಮ ಅಡಿಗ ಉಪಸ್ಥಿತರಿದ್ದರು. ಆಕಾಶವಾಣೆ ಕಲಾವಿದ ಹೆಚ್. ಚಂದ್ರಶೇಖರ ಕೆದ್ಲಾಯ ಅಡಿಗರ ಕವನಗಳನ್ನು ಭಾವ ಪೂರ್ಣವಾಗಿ ಹಾಡಿದರು.
ಶಿಕ್ಷಕಿ ವೈಶಾಲಿ ಪ್ರಾರ್ಥಿಸಿದರು. ಉಪಪ್ರಾಂಶುಪಾಲ ಉಮೇಶ ರಾಯ್ಕರ್ ಸ್ವಾಗತಿಸಿ, ಕೆ. ಪಿ ನಾಯಕ್ ಮತ್ತು ಯು. ಗಣೇಶ ಪ್ರಸನ್ನ ಮಯ್ಯ ಅತಿಥಿಗಳನ್ನು, ಸನ್ಮಾನಿತರನ್ನು ಪರಿಚಯಿಸಿದರು. ಸುವಿಚಾರ ವೇದಿಕೆಯ ಪ್ರಧಾನ ಸಂಚಾಲಕ ವಿ. ಹೆಚ್. ನಾಯಕ್ ವಂದಿಸಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.