ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ ರಾಷ್ಟ್ರ ನಿರ್ಮಾಣದ ಕನಸಿನಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜಕೀಯ ಶಕ್ತಿ ಇದ್ದರೆ ಮತ್ತಷ್ಟು ಜನಸೇವೆಯಲ್ಲಿ ತೊಡಗಿಸಿಕೊಳ್ಳಬಹುದೆಂಬ ಉದ್ದೇಶದಿಂದ ಆತ್ಮೀಯರು ಹಾಗೂ ಹಿತಚಿಂತಕರ ಬೆಂಬಲ ಮತ್ತು ಸೂಚನೆಯಂತೆ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹೇಳಿದರು.
ಅವರು ತಮ್ಮ ಸಂಗಡಿಗರ ಜೊತೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿ ಪ್ರತಿ ಬೂತ್ ಮಟ್ಟದಲ್ಲಿಯೂ ಯುವಕರನ್ನು ಸಂಘಟಿಸುವ ಕಾರ್ಯ ಮಾಡಲಾಗುವುದು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ವಾಸುದೇವ ರಾವ್, ಮಹಾಪ್ರದಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ ಕೊಲ್ಲೂರು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರೋಹಿತ್ ಕರಂಬಳ್ಳಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಉಪಾಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ಕಾರ್ಯದರ್ಶಿ ಅನಿತಾ ಶೆಟ್ಟಿ, ಜಾತ್ಯಾತೀತ ಜನತಾದಳದ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ ಮರವಂತೆ, ಜಿಲ್ಲಾ ವಕೀಲ ವೇದಿಕೆಯ ಅಧ್ಯಕ್ಷ ರಂಜಿತ ಕುಮಾರ್ ಶೆಟ್ಟಿ, ಕುಂದಾಪುರ ಜೆಡಿಎಸ್ ಅಧ್ಯಕ್ಷ ಹುಸೇನ್ ಹೈಕಾಡಿ, ಸಂಘಟನಾ ಪ್ರಮುಖರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಿಲ್ಲಾ ಮಾಜಿ ಅಧ್ಯಕ್ಷ ದಕ್ಷತ್ ಆರ್ ಶೆಟ್ಟಿ, ಜಾತ್ಯಾತೀತ ಜನತಾದಳ ಜಿಲ್ಲಾ ಉಸ್ತುವಾರಿ ಸುಧಾಕರ ಶೆಟ್ಟಿ, ಜಯರಾಮ ಆಚಾರ್ಯ, ನಿತಿನ್ ಶೆಟ್ಟಿ ಬೈಂದೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೈಂದೂರು ಜೆಡಿಎಸ್ ಅಧ್ಯಕ್ಷ ಸಂದೇಶ್ ಭಟ್ ಸ್ವಾಗತಿಸಿದರು, ಮಹಾ ಪ್ರದಾನ ಕಾರ್ಯದರ್ಶಿ ಕೆ.ಎನ್. ಶ್ರೀಕಾಂತ ಅಡಿಗ ಕೊಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿರು. ಎಲ್ಲೂರು ರಾಜೇಶ್ ಕಿಣಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.